ಬ್ರಿಸ್ಪೇನ್: ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳಿದ ಆರ್. ಅಶ್ವಿನ್, ಸುದ್ದಿಗೋಷ್ಠಿಯಲ್ಲಿ ನಾಲ್ವರ ಹೆಸರು ಕೂಡ ಹೇಳಿದ್ದಾರೆ.
ಆಸ್ಟ್ರೇಲಿಯಾ (Australia) ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ನಂತರ ರೋಹಿತ್ ಶರ್ಮಾ ಜೊತೆ ಅಶ್ವಿನ್ ಸುದ್ದಿಗೋಷ್ಠಿಗೆ ತೆರಳಿ ತಮ್ಮ ವಿದಾಯ ಘೋಷಿಸಿದರು. ಕ್ರಿಕೆಟ್ ಪ್ರಯಾಣದಲ್ಲಿ ಭಾಗವಾದ ಎಲ್ಲಾ ಕೋಚ್‌ಗಳು, ಪ್ರಮುಖವಾಗಿ ರೋಹಿತ್, ವಿರಾಟ್, ಅಜಿಂಕ್ಯ, ಚೇತೇಶ್ವರ ಪೂಜಾರ ಹಿಂದುಗಡೆ ನಿಂತು ಕ್ಯಾಚ್‌ಗಳನ್ನು ಪಡೆದು ನನಗೆ ವಿಕೆಟ್ ಗಳಿಸುವಲ್ಲಿ ನೆರವಾಗಿದ್ದಾರೆ ಎಂದು ನೆನೆದಿದ್ದಾರೆ.
ಭಾರತೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ದಿನ. ಇನ್ನೂ ಸಾಮರ್ಥ್ಯ ಇದೆ ಎಂದು ನಾನು ಭಾವಿಸಿದ್ದೇನೆ. ಬಹುಶಃ ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಪ್ರದರ್ಶಿಸಲಿದ್ದೇನೆ ಎಂದು ಕೂಡ ಅವರು ಹೇಳಿದ್ದಾರೆ.
ರೋಹಿತ್ ಶರ್ಮಾ ಸೇರಿದಂತೆ ಸಹ ಆಟಗಾರರೊಂದಿಗೆ ಸಾಕಷ್ಟು ನೆನಪುಗಳನ್ನು ಸೃಷ್ಟಿಸಿದ ನೆನಪು ನನ್ನಲ್ಲಿದೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.








