ಯುವ ದಸಾರದಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್…
ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಕಳೆ ಕಟ್ಟಿದೆ. ನವೆಂಬರ್ 26 ರಿಂದ ಶುರುವಾದ ನವರಾತ್ರಿ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಪ್ರತಿ ದಿನವೂ ಮೈಸೂರಿನಲ್ಲಿ ಹಲವಾರು ಕಾರ್ಯಕ್ರಮಗಳು ಜರುಗುತ್ತಿವೆ. ಹಾಗೇ ಬುಧವಾರ, ಮೈಸೂರಿನಲ್ಲಿ ಯುವ ದಸರಾ ಕಾರ್ಯಕ್ರಮವನ್ನ ಉದ್ಘಾಟಿಸಲಾಯಿತು. ಯುವ ದಸರಾ ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ನಿನ್ನೆ ನಡೆದ ಯುವ ದಸರಾದ ಮೊದಲ ದಿನವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಸರ್ಮಪಿಸಲಾಯ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ದೀಪ ಬೆಳಗಿಸುವ ಮೂಲಕ ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಪ್ಪು ಅವರನ್ನು ನೆನೆಯುವ ಮೂಲಕವೇ ಯುವ ದಸರಾಗೆ ಚಾಲನೆ ನೀಡಲಾಯ್ತು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಟೀಸರ್ ಕೂಡಾ ಪ್ರಸಾರ ಮಾಡಲಾಯ್ತು. ಈ ಸಮಯದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ನೆನೆದು ಕಣ್ಣೀರಿಟ್ಟಿದ್ದಾರೆ.
ಅಕ್ಟೋಬರ್ 29ಕ್ಕೆ ಪುನೀತ್ ಅಗಲಿ ಒಂದು ವರ್ಷವಾಗುತ್ತಿದೆ. ಅವರ ಪುಣ್ಯತಿಥಿ ಅಂಗವಾಗಿ ಹಿಂದಿನ ದಿನ, ಅಂದರೆ ಅಕ್ಟೋಬರ್ 28 ರಂದು ‘ಗಂಧದಗುಡಿ’ ತೆರೆಗೆ ಬರುತ್ತಿದೆ.
AshwiniPuneethRajkumar: Ashwini Puneeth Rajkumar shed tears remembering Appu on Yuva Dasara…








