ರಿಟೈರ್ಮೆಂಟ್ ಬಗ್ಗೆ ಅಶ್ವಿನ್ ಭಾವನಾತ್ಮಕ ಮಾತು Ashwin’s saaksha tv
ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಆದ್ರೆ ಕೆಲ ವರ್ಷಗಳ ಹಿಂದೆ ಅಶ್ವಿನ್, ಬ್ಯಾಡ್ ಪಾರ್ಮ್ ನಿಂದಾಗಿ ಟೀಂ ಇಂಡಿಯಾದಿಂದ ಹೊರ ಬಿದಿದ್ದರು. ಆ ಸಂದರ್ಭದಲ್ಲಿ ಅವರು ರಿಟೈನ್ಮೆಂಡ್ ಬಗ್ಗೆ ಯೋಜನೆ ಮಾಡಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.
ನನ್ನ ಸುತ್ತ ಮುತ್ತಲಿನ ಪರಿಸ್ಥಿತಿಯಿಂದಾಗಿ ನಾನು ನಿವೃತ್ತಿ ಘೋಷಣೆ ಮಾಡುವ ಯೋಚನೆಯಲ್ಲಿದ್ದೆ. ಆ ಸಮಯದಲ್ಲಿ ನನ್ನ ಕುಟುಂಬಸ್ಥರು ನನಗೆ ಬೆಂಬಲಿ ನೀಡಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.
2018-2020 ರ ಅವಧಿಯಲ್ಲಿ ಅಶ್ವಿನ್ ಬ್ಯಾಡ್ ಪಾರ್ಮ್ ಗೆ ಸಿಲುಕಿದ್ದರು. ಈ ಬಗ್ಗೆ ಇದೀಗ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯೆ ನೀಡಿದ್ದಾರೆ.
“ಕೆಲವು ಕಾರಣಕ್ಕಾಗಿ … ನಾನು ನಿವೃತ್ತಿ ಘೋಷಿಸಲು ಬಯಸಿದ್ದೆ. ನಾನು ಇಂಚೂರಿಯಾದಾಗ ನನ್ನ ಬಗ್ಗೆ ಹಲವರು ಕಠಿಣವಾಗಿ ಮಾತನಾಡಿದ್ದರು. ನನ್ನನ್ನು ಬೆಂಬಲಿಸುವವರು ಏಕೆ ಇಲ್ಲ? ನಾನು ತಂಡಕ್ಕೆ ಹಲವು ವಿಜಯಗಳನ್ನು ನೀಡಿದ್ದೇನೆ! ಆದರೆ ನನಗೇ ಯಾಕೆ ಹೀಗಾಗುತ್ತಿದೆ? ವಾಸ್ತವವಾಗಿ, ನಾನು ಎದುರುಗಿರುವವರ ಸಹಾಯವನ್ನು ನಿರೀಕ್ಷಿಸುವ ಏಕೈಕ ವ್ಯಕ್ತಿ ಅಲ್ಲ. ಆದರೆ … ನನ್ನ ನೋವಿನ ಬಗ್ಗೆ ಸಹಾನುಭೂತಿ ಹೊಂದಿರುವ ಜನರಿದ್ದರೆ ಅದು ಉತ್ತಮವಲ್ಲವೇ! ನನ್ನ ನೋವನ್ನು ಹಂಚಿಕೊಳ್ಳಲು ಒಂದು ಭುಜವಿದ್ದರೆ ಅದು ತುಂಬಾ ಚೆನ್ನಾಗಿತ್ತು ಅನಿಸಿತ್ತು.
2018 ರ ಇಂಗ್ಲೆಂಡ್ ಸರಣಿ .. ಸೌತಾಂಪ್ಟನ್ ಟೆಸ್ಟ್ ನಂತರ .. ಮತ್ತೆ ಆಸ್ಟ್ರೇಲಿಯಾದಲ್ಲಿ ಅಡಿಲೇಡ್ ಟೆಸ್ಟ್ … ಕೆಟ್ಟ ಪರಿಸ್ಥಿತಿಗಳು. ಅಂತಹ ಸಮಯದಲ್ಲಿ ನನ್ನ ಪತ್ನಿ ನನಗೆ ಬೆಂಬಲವಾಗಿ ನಿಂತಳು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಮರಳಲು ನನ್ನ ತಂದೆ ನನ್ನನ್ನು ಪ್ರೋತ್ಸಾಹಿಸಿದರು ಎಂದು ಅಶ್ವಿನ್ ಭಾವುಕರಾಗಿ ಹೇಳಿದರು.









