Asia Cup 2022 | ಶಮಿ ಮಿಸ್ ಆಗಿದ್ದು ಯಾಕೆ ?
ಏಷ್ಯಾಕಪ್ 2022 ಟೂರ್ನಿಗೆ ಭಾರತ ತಂಡ ಪ್ರಕಟವಾಗಿದೆ. ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಟೀಂ ಇಂಡಿಯಾಗೆ ವಾಪಸ್ ಆಗಿದ್ದರೇ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡಿಲಾಗಿದೆ.
ಇತ್ತ ಶ್ರೇಯಸ್ ಅಯ್ಯರ್ ಬ್ಯಾಕ್ ಆಪ್ ಪ್ಲೇಯರ್ ಆಗಿದ್ದಾರೆ. ದೀಪಕ್ ಹೂಡಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಜಸ್ ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಇಂಜೂರಿ ಸಮಸ್ಯೆಯಿಂದಾಗಿ ಸ್ಥಾನ ಕಳೆದುಕೊಂಡಿದ್ದಾರೆ. ಅವರು ಸದ್ಯ ಬೆಂಗಳೂರಿನ ಎನ್ ಸಿ ಎ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೀಂ ಇಂಡಿಯಾದ ವೇಗದ ವಿಭಾಗವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ.
ಈ ನಡುವೆ ಉತ್ತಮ ಪ್ರದರ್ಶನದ ಹೊರತಾಗಿಯೂ ಮೊಹ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಅವರನ್ನು ಕೇವಲ ಟೆಸ್ಟ್ ಮತ್ತು ಏಕದಿನಕ್ಕೆ ಸೀಮಿತ ಮಾಡಲು ಬಿಸಿಸಿಐ ಉದ್ದೇಶಿಸಿದಂತೆ ಇದೆ.
ಆದ್ರೂ ಶಮಿ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ.
ಅದರಂತೆ ಟೀಂ ಇಂಡಿಯಾ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ, ಶಮಿಯನ್ನು ಆಯ್ಕೆ ಮಾಡದಿರುವ ಬಗ್ಗೆ ಸ್ಪಂದಿಸಿದ್ದಾರೆ.
ಒಂದು ವೇಳೆ ನಾನೇನಾದ್ರೂ ತಂಡದ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷನಾಗಿದ್ದರೇ ಖಂಡಿತವಾಗಿಯೂ ಮೊಹ್ಮದ್ ಶಮಿ ಅವರನ್ನು ಆಯ್ಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ನಾಲ್ಕು ಮಂದಿ ಸ್ಪಿನ್ನರ್ ಗಳ ಬದಲಾಗಿ ಒಬ್ಬ ಹಿರಿಯ ವೇಗಿಯನ್ನು ಆಯ್ಕೆ ಮಾಡಿದ್ದರೇ ಚೆನ್ನಾಗಿ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ನನ್ನ ತಂಡದಲ್ಲಿ ಶಮಿಗೆ ಖಂಡಿತವಾಗಿಯೂ ಸ್ಥಾನ ನೀಡುತ್ತಿದೆ. ರವಿ ಬಿಷ್ಣೋಯ್ನಿ ಅವರನ್ನು ಕೈಬಿಟ್ಟು ಶಮಿಗೆ ಅವಕಾಶ ನೀಡುತ್ತಿದೆ.
ನಿಜ ಹೇಳಬೇಕಂದರೇ ಅಕ್ಷರ್ ಪಟೇಲ್ ಕೂಡ ತಂಡದಲ್ಲಿ ಇರಬೇಕಾಗಿತ್ತು. ಆದ್ರೆ ಅಶ್ವಿನ್ – ಅಕ್ಷರ್ ಪಟೇಲ್ ಇಬ್ಬರಲ್ಲಿ ಯಾರು ಅಂದ್ರೆ ಸಿನಿಯರ್ ಗಳಿಗೆ ನನ್ನ ವೋಟು ಅಂತಾ ಶ್ರೀಕಾಂತ್ ಹೇಳಿದ್ದಾರೆ.
ಅದು ಹೇಗೆ ಇರಲಿ, ಏಷ್ಯಾ ಕಪ್ ಗೆ ಆಯ್ಕೆಯಾದ ತಂಡ ಚೆನ್ನಾಗಿದೆ. ಇದು ಟಿ 20 ವಿಶ್ವಕಪ್ ಗೆ ಬ್ಲೂ ಪ್ರಿಂಟ್ ರೀತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಆಸ್ಟ್ರೇಲಿಯಾ ಪಿಚ್ ಗಳಲ್ಲಿ ಮಿಂಚಬಲ್ಲ ಅಕ್ಷರ್ ಪಟೇಲ್ ಗೆ ವಿಶ್ವಕಪ್ ನಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ.
ದೀಪಕ್ ಹೂಡಾ ಕೂಡ ಬ್ಯಾಟ್ ಮತ್ತು ಬೌಲ್ ಮಾಡಬಹುದು. ಅದಕ್ಕಾಗಿಯೇ ಅವರಿಗೆ ತಂಡದಲ್ಲಿ ಸ್ಥಾನ ದೊರಕಿದೆ ಎಂದು ಶ್ರೀಕಾಂತ್ ಅಭಿಪ್ರಾಯಟ್ಟಿದ್ದಾರೆ.
ಅಂದಹಾಗೆ ಕಳೆದ ಟಿ 20 ವಿಶ್ವಕಪ್ ನಲ್ಲಿ ಮೊಹ್ಮದ್ ಶಮಿ ಆರು ವಿಕೆಟ್ ಪಡೆದು ಮಿಂಚಿದ್ದರು. ಬಳಿಕ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ಶಮಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು.








