Asia Cup 2022 : ಕೆ.ಎಲ್.ರಾಹುಲ್ ಗೆ ಅಗ್ನಿಪರೀಕ್ಷೆ..
ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ.
ಹೀಗಾಗಿ ಅವರನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಆದ್ರೆ ಈ ಮೆಗಾ ಇವೆಂಟ್ ಗೂ ಮುನ್ನಾ ರಾಹುಲ್ ಫಿಟ್ ನೆಸ್ ಟೆಸ್ಟ್ ಎದುರಿಸಬೇಕಾಗಿದೆ.
ಒಂದು ವೇಳೆ ರಾಹುಲ್ ಈ ಪರೀಕ್ಷೆಯಲ್ಲಿ ವಿಫಲವಾದರೇ ಅಭಿಮಾನಿಗಳಿಗೆ ಮತ್ತೊಂದು ಬಾರಿ ನಿರಾಸೆ ಎದುರಾಗಲಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಕೆ.ಎಲ್.ರಾಹುಲ್ ದಕ್ಷಿಣ ಆಫ್ರಿಕಾ ಸರಣಿಗೆ ನಾಯಕರಾಗಿ ಆಯ್ಕೆ ಆಗಿದ್ದರು. ಆದ್ರೆ ಗಾಯದ ಸಮಸ್ಯೆಯಿಂದಾಗಿ ಅವರು ಸರಣಿಯಿಂದ ಹೊರಗುಳಿದರು.
ಇದಾದ ಬಳಿಕ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆ ಮಾಡಲಾಯಿತು. ಆಗ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ, ಕೆರಿಬಿಯನ್ ಪ್ರವಾಸವನ್ನು ಮಿಸ್ ಮಾಡಿಕೊಂಡರು.
ಇದರಿಂದ ಬೆಂಗಳೂರಿನ ಎನ್ ಸಿಎ ದಲ್ಲಿ ಚಿಕಿತ್ಸೆ ಪಡೆದ ರಾಹುಲ್, ಸೋಮವಾರ ಬಿಸಿಸಿಐ ಏಷ್ಯಾಕಪ್ ಗೆ ಪ್ರಕಟಿಸಿದ 15 ಮಂದಿ ಆಟಗಾರರಿಂದ ಕೂಡಿದ ತಂಡದಲ್ಲಿ ಸ್ಥಾನಪಡೆದಿದ್ದಾರೆ.
ಆದ್ರೆ ನಿಯಮಗಳ ಪ್ರಕಾರ ಮುಂಬರುವ ವಾರದಲ್ಲಿ ಬಿಸಿಸಿಐ ನಿರ್ವಹಿಸಲಿರುವ ಫಿಟ್ ನೆಟ್ ಟೆಸ್ಟ್ ನಲ್ಲಿ ರಾಹುಲ್ ಭಾಗಿಯಾಗಬೇಕಾಗಿದೆ.
ಒಂದು ವೇಳೆ ಕೆ.ಎಲ್.ರಾಹುಲ್ ಏನಾದ್ರೂ ಫಿಟ್ ನೆಸ್ ಪರೀಕ್ಷೆಯಲ್ಲಿ ಫೇಲ್ ಆದರೇ, ಸ್ಟಾಂಡ್ ಬೈ ಪ್ಲೇಯರ್ ಆಗಿರುವ ಶ್ರೇಯಸ್ ಅಯ್ಯರ್, ರಾಹುಲ್ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಆದ್ರೆ ರಾಹುಲ್ ಫಿಟ್ ನೆಸ್ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾತನಾಡಿದ್ದು, ಕೆ.ಎಲ್.ರಾಹುಲ್ ಪೂರ್ತಿಯಾಗಿ ಫಿಟ್ ಆಗಿದ್ದಾರೆ.
ಅದಕ್ಕಾಗಿಯೇ ಆತನನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದ್ರೆ ಪ್ರೋಟೋಕಾಲ್ ಪ್ರಕಾರ ಬೆಂಗಳೂರಿನಲ್ಲಿ ರಾಹುಲ್ ಗೆ ಫಿಟ್ ನೆಸ್ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅಂದಹಾಗೆ ಐಪಿಎಲ್ ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸಿದ್ದ ರಾಹುಲ್, ಅದಾದ ಬಳಿಕ ಒಂದೇ ಒಂದು ಪಂದ್ಯವನ್ನಾಡಿಲ್ಲ. ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಅವರು 15 ಇನ್ನಿಂಗ್ಸ್ ಗಳಲ್ಲಿ 616 ರನ್ ಗಳಿಸಿದ್ದಾರೆ.
ಇನ್ನು ಆಗಸ್ಟ್ 27 ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. 28 ನೇ ತಾರೀಕು ಟೀಂ ಇಂಡಿಯಾ, ಪಾಕಿಸ್ತಾನ ತಂಡವನ್ನು ಎದುರಿಸಲಿದೆ.