Asia Cup 2022 | ಆರು ವರ್ಷಗಳ ನಂತರ ಕೊಹ್ಲಿ ಬೌಲಿಂಗ್ !!
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಏಷ್ಯಾ ಕಪ್-2022 ರ ಅಂಗವಾಗಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.
ಟಿ 20 ಕ್ರಿಕೆಟ್ ನಲ್ಲಿ ಸುಮಾರು ಆರು ವರ್ಷಗಳ ನಂತರ ಕೊಹ್ಲಿ ಬೌಲಿಂಗ್ ಮಾಡಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೇವಲ ಒಂದು ಓವರ್ ಬೌಲ್ ಮಾಡಿದರು.
ಹಾಂಕಾಂಗ್ ಇನ್ನಿಂಗ್ಸ್ ನಲ್ಲಿ 17 ಓವರ್ ಬೌಲ್ ಮಾಡಿದ ಕೊಹ್ಲಿ ನೀಡಿದ್ದು ಆರು ರನ್ ಮಾತ್ರ.

ಕೊಹ್ಲಿ ಬೌಲಿಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಹ್ಲಿ ಕೊನೆಯ ಬಾರಿಗೆ 2016ರ ಏಷ್ಯಾಕಪ್‌ನಲ್ಲಿ ಟಿ20ಯಲ್ಲಿ ಬೌಲಿಂಗ್ ಮಾಡಿದ್ದರು.
ಇದುವರೆಗೆ 101 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ 44 ಎಸೆತಗಳಲ್ಲಿ 1 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 59 ರನ್ ಗಳಿಸಿದರು.
ಅದರಲ್ಲೂ ಕಿಂಗ್ ಕೊಹ್ಲಿ ಸೂರ್ಯಕುಮಾರ್ ಯಾದವ್ ಅವರೊಂದಿಗೆ 98 ರನ್‌ಗಳ ಮಹತ್ವದ ಜೊತೆಯಾಟವನ್ನು ಸ್ಥಾಪಿಸಿದರು.
ಇದು ಈ ವರ್ಷದಲ್ಲಿ ಕೊಹ್ಲಿ ಅವರ ಎರಡನೇ ಟಿ20 ಅರ್ಧಶತಕವಾಗಿದೆ.








