Asia Cup 2022 : ಸ್ಪೆಷಲ್ ಮಾಸ್ಕ್ ಹಾಕಿಕೊಂಡು ವಿರಾಟ್ ರನ್ನಿಂಗ್
ಏಷ್ಯಾಕಪ್ 2022 ಸೂಪರ್ 4 ಹಂತದ ಭಾಗವಾಗಿ ಬಿಗ್ ಫೈಟ್ ನಡೆಯಲಿದೆ. ಗ್ರೂಪ್ ದಶದಲ್ಲಿ ಮತ್ತೊಮ್ಮೆ ಇಂಡೋ – ಪಾಕ್ ಕದನ ಜರುಗಲಿದೆ.
ಮೊದಲ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಇತ್ತ ಪಾಕ್ ವಿರುದ್ಧ ಗೆಲುವಿನ ಸವಾರಿಯನ್ನು ಮುಂದುವರೆಸಲು ಟೀಂ ಇಂಡಿಯಾ ಪ್ಲಾನ್ ಮಾಡಿಕೊಂಡಿದೆ.
ಹೀಗಾಗಿ ಟೀಂ ಇಂಡಿಯಾದ ಆಟಗಾರರು ನೆಟ್ ಗಳಲ್ಲಿ ಬೆವರಿಳಿಸುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬೇರೆ ಲೆವೆನ್ ನಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ.
ಮುಖಕ್ಕೆ ವಿಶೇಷವಾಗಿ ಸ್ಪೋರ್ಟ್ ಮಾಸ್ಕ್ (High altitude mask ) ಹಾಕಿಕೊಂಡು ರನ್ನಿಂಗ್ ಪ್ರಾಕ್ಟೀಸ್ ಮಾಡಿದ್ದಾರೆ.
ಈ ಮಾಸ್ಕ್ ಹಾಕಿಕೊಂಡು ರನ್ ಮಾಡುವುದರಿಂದ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುತ್ತದೆ.
ಹೀಗಾಗಿ ವಿರಾಟ್ ಈ ಮಾಸ್ಕ್ ಹಾಕಿಕೊಂಡು ರನ್ನಿಂಗ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಕೆಲವು ದಿನಗಳಿಂದ ಬ್ಯಾಡ್ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ನಲ್ಲಿ ಅದರಿಂದ ಹೊರಬಂದಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.
ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 34 ರನ್ ಗಳಿಸಿದ್ದ ವಿರಾಟ್ ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ 59 ರನ್ ಗಳಿಸಿದ್ದಾರೆ.