Asia Cup 2022 : ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ ಇಂಡೋ – ಪಾಕ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ.
ದುಬೈ ವೇದಿಕೆಯಾಗಿ ಆಗಸ್ಟ್ 28 ರಂದು ಈ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ.
ಈ ಪಂದ್ಯವನ್ನು ವೀಕ್ಷಿಸಲು ವೀರಾಭಿಮಾನಿಗಳು ಈಗಾಗಲೇ ಟಿಕೆಟ್ ಗಳನ್ನು ಖರೀದಿಸಿದ್ದಾರೆ.
ಇದು ಹೀಗಿದ್ದರೇ ಏಷ್ಯಾಕಪ್ 2022 ರ ಟೂರ್ನಿಯ ಮ್ಯಾಚ್ ಗಳನ್ನು ಸ್ಟಾರ್ಸ್ಟ್ ನೆಟ್ ವರ್ಕ್ ಪ್ರಸಾರ ಮಾಡುತ್ತಿದೆ.
ಮೊಬೈಲ್ ನಲ್ಲಿ ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಈ ಪಂದ್ಯವನ್ನು ವೀಕ್ಷಿಸಬಹುದು.

ಆದ್ರೆ ಈ ಎರಡು ಮಾಧ್ಯಮಗಳಲ್ಲಿ ಪಂದ್ಯಗಳನ್ನು ನೋಡಲು ಹಣ ಕೊಡಬೇಕಾಗುತ್ತದೆ.
ಈ ಮೆಗಾ ಟೂರ್ನಿಯನ್ನು ಟಿವಿಯಲ್ಲಿ ಫ್ರಿಯಾಗಿ ನೋಡಲು ಬಯಸುವವರಿಗೆ ಗುಡ್ ನ್ಯೂಸ್ ಇಲ್ಲಿದೆ.
ಭಾರತ ಸರ್ಕಾರದ ಒಡೆತನದ ದೂರದರ್ಶನ DD ಸ್ಪೋರ್ಟ್ಸ್ ಮತ್ತು DD Freedish ನಲ್ಲಿ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಏತನ್ಮಧ್ಯೆ ದೂರದರ್ಶನದಲ್ಲಿ ಪ್ರಸಾರವಾಗುವ ಏಷ್ಯಾಕಪ್ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ.
‘ಭಾರತ-ಪಾಕಿಸ್ತಾನ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವ ಅವಕಾಶ.. ತುಂಬಾ ಚೆನ್ನಾಗಿದೆ’ ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.








