Asia Cup 2022 : ಪ್ರೆಸ್ ಮೀಟ್ ಗೆ ರೋಹಿತ್ ಗೈರು : ಕೆ.ಎಲ್.ರಾಹುಲ್ ಹೇಳಿದ್ದೇನು
ಏಷ್ಯಾಕಪ್ ನಲ್ಲಿ ಭಾರತ – ಪಾಕಿಸ್ತಾನ್ ನಡುವಿನ ಪಂದ್ಯಕ್ಕೆ ಕೇವಲ 24 ಗಂಟೆಗಳು ಮಾತ್ರ ಬಾಕಿ ಇದೆ.
ಮ್ಯಾಚ್ ನಲ್ಲಿ ಪ್ರಾಬಲ್ಯ ಸಾಧಿಸಲು ಉಭಯ ತಂಡಗಳು ಕಸರತ್ತು ನಡೆಸಿವೆ.
ಆದ್ರೆ ಪಾಕಿಸ್ತಾನ ತಂಡಕ್ಕೆ ಇಂಜೂರಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.
ಮೊದಲ ಶಾಹಿನ್ ಅಫ್ರಿದಿ ಇಂಜೂರಿಯಿಂದ ಟೂರ್ನಿಗೆ ದೂರವಾದ್ರೆ, ಇದೀಗ ಮೊಹ್ಮದ್ ವಸೀಮ್ ಏಷ್ಯಾಕಪ್ ಗೆ ದೂರವಾಗಿದ್ದಾರೆ.
ಅಂದಹಾಗೆ ಪಂದ್ಯಕ್ಕೂ ಮುನ್ನಾ ಉಭಯ ತಂಡಗಳ ನಾಯಕರು ಪ್ರೆಸ್ ಮೀಟ್ ಗೆ ಬರೋದು ಪದ್ದತಿಯಾಗಿದೆ.
ಆದ್ರೆ ಈ ಪ್ರೆಸ್ ಮೀಟ್ ಗೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಗೈರಾಗಿದ್ದರು.
ಹೀಗಾಗಿ ಹಿಟ್ ಮ್ಯಾನ್ ಸ್ತಾನದಲ್ಲಿ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಹಾಜರಾಗಿದ್ದರು.
ಕೆ.ಎಲ್ ರಾಹುಲ್ ಮಾತನಾಡುತ್ತಾ, ಮ್ಯಾಚ್ ಸೋಲು ಅನ್ನೋದು ನೋವಿಸುವುದು ಸಹಜ,
ಕಳೆದ ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ನಾವು ಸೋಲು ಅನುಭವಿಸಿದ್ವಿ. ಆ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ನಮಗೆ ಒಳ್ಳೆ ಅವಕಾಶ ಸಿಕ್ಕಿದೆ.
ಐಸಿಸಿ ಟೂರ್ನಿಗಳಲ್ಲಿ ಬಿಟ್ಟು ಪಾಕಿಸ್ತಾನ್ ತಂಡದ ಜೊತೆ ನಾವು ದ್ವಿಪಕ್ಷೀಯ ಪಂದ್ಯಗಳನ್ನಾಡುತ್ತಿಲ್ಲ.
ಹೀಗಾಗಿಯೇ ಪಾಕ್ ಜೊತೆ ಮ್ಯಾಚ್ ಎಂದರೇ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಆದ್ರೆ ಅವೆಲ್ಲವೂ ಕ್ರೀಡೆಯ ಭಾಗವೇ ಆಗಿದೆ. ಕ್ರೀಡೆ ಯಾವುದೇ ಆಗಿರಲಿ ಸೊನ್ನೆಯಿಂದ ಶುರುವಾಗುತ್ತದೆ.

ಇನ್ನು ಪಾಕಿಸ್ತಾನ್ ಬೌಲರ್ ಶಾಹಿನ್ ಅಫ್ರಿದಿ ಬೇಗ ಚೇತರಿಸಿಕೊಳ್ಳಬೇಕು ಎಂದು ನಾನು ಬಯಸುತ್ತೇನೆ.
ಒಬ್ಬ ವರ್ಲ್ಡ್ ಕ್ಲಾಸ್ ಬೌಲರ್ ಅನ್ನು ನಾವು ಈ ಪಂದ್ಯದಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.
ಇನ್ನು ಗಾಯದಿಂದ ಚೇತರಿಸಿಕೊಂಡ ಕೆ.ಎಲ್.ರಾಹುಲ್ ಜಿಂಬಾಬ್ವೆ ಸರಣಿ ಮೂಲಕ ಟೀಂ ಇಂಡಿಯಾಗೆ ವಾಪಸ್ ಆದರು.
ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾದ ನಾಯಕರಾಗಿ ರಾಹುಲ್, ಚೊಚ್ಚಲ ಸರಣಿಯನ್ನು ಕೈವಶ ಮಾಡಿಕೊಂಡರು.
ಈ ಸೀರಿಸ್ ನಲ್ಲಿ ಭಾರತ 3 – 0 ಅಂತರದೊಂದಿಗೆ ದಿಗ್ವಿಜಯ ಸಾಧಿಸಿತ್ತು. ಆದ್ರೆ ರಾಹುಲ್ ಬ್ಯಾಟರ್ ಆಗಿ ನಿರಾಸೆ ಮೂಡಿಸಿದರು.








