Asia Cup 2022 : ಟೀಂ ಇಂಡಿಯಾಗೆ ಲಕ್ಷ್ಮಣ್ ತಾತ್ಕಾಲಿಕ ಹೆಡ್ ಕೋಚ್
ಮಹತ್ವದ ಏಷ್ಯಾಕಪ್ ಗೂ ಮುನ್ನಾ ಟೀಂ ಇಂಡಿಯಾಗೆ ಭಾರಿ ಆಘಾತ ಎದುರಾಗಿದೆ. ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಇದರೊಂದಿಗೆ ಏಷ್ಯಾಕಪ್ ಟೂರ್ನಿಗೆ ದ್ರಾವಿಡ್ ದೂರವಾಗಲಿದ್ದಾರೆ. ಇದು ಟೀಂ ಇಂಡಿಯಾಗೆ ಕೊಂಚ ಹಿನ್ನಡೆ ತಂದಿದೆ.
ಯಾಕಂದರೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆದ ಬಳಿಕ ಏಷ್ಯಾಕಪ್ ಹಾಗೂ ಟಿ 20 ವಿಶ್ವಕಪ್ ಗೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.
ತಂಡದಲ್ಲಿ ಯುವಕರಿಗೆ ಮಣೆ ಹಾಕುತ್ತಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. ಆದ್ರೆ ಇದೀಗ ರಾಹುಲ್ ದ್ರಾವಿಡ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಲೆಕ್ಕಾಚಾರಗಳು ಉಲ್ಟಾ ಆಗುವ ಸಾಧ್ಯತೆಗಳಿವೆ.
ಮತ್ತೊಂದು ಕಡೆ ರಾಹುಲ್ ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾದ ಕಾರಣ ಅವರ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾದ ಕೋಚ್ ಜವಾಬ್ದಾರಿಯನ್ನು ತುಂಬಲಿದ್ದಾರೆ.
ಪ್ರಸ್ತುತ ಸಹಾಯಕ ಕೋಚ್ ಪಾರಸ್ ಮಾಂಬ್ರೆ ಇನ್ ಚಾರ್ಜ್ ಕೋಚ್ ಆಗಿ ವ್ಯವಹರಿಸುತ್ತಿದ್ದಾರೆ.
ಎನ್ ಸಿ ಎ ಡೈರೆಕ್ಟರ್ ವಿವಿಎಸ್ ಲಕ್ಷ್ಮಣ್ ಅವರನ್ನ ನೇರವಾಗಿ ಯುಎಈ ಗೆ ಕಳುಹಿಸಿಕೊಡಲು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ.
ಅಂದಹಾಗೆ ಕೆ.ಎಲ್.ರಾಹುಲ್ ನೇತೃತ್ವದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಲಕ್ಷ್ಮಣ್ ಅವರು ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ವ್ಯವಹರಿಸಿದ್ದರು.
ಈ ಸಿರೀಸ್ ನಲ್ಲಿ ಟೀಂ ಇಂಡಿಯಾ 3 – 0 ಅಂತರಲ್ಲಿ ದಿಗ್ವಿಜಯ ಸಾಧಿಸಿದೆ. ಎನ್ ಸಿಎ ಡೈರೆಕ್ಟರ್ ಆಗಿರುವ ಲಕ್ಷ್ಮಣ್ ಇದಕ್ಕೂ ಮುನ್ನಾ ಶ್ರೀಲಂಕಾ ಪ್ರವಾಸದಲ್ಲೂ ಕೋಚ್ ಆಗಿ ಸಕ್ಸಸ್ ಆಗಿದ್ದರು.
ಇದೇ ಕಾರಣಕ್ಕಾಗಿಯೇ ಏಷ್ಯಾಕಪ್ ವರೆಗೆ ದ್ರಾವಿಡ್ ಸ್ಥಾನದಲ್ಲಿ ಲಕ್ಷ್ಮಣ್ ಅವರು ಟೀಂ ಇಂಡಿಯಾದ ಕೋಚ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಏಷ್ಯಾಕಪ್ ಗೆ ಆಯ್ಕೆಯಾಗಿ ರೋಹಿತ್ ಶರ್ಮಾ ಬಳಗದಲ್ಲಿ ಮೂವರು ಬಿಟ್ಟು ಇನ್ನುಳಿದ ಎಲ್ಲಾ ಸದಸ್ಯರು ಮಂಗಳವಾರ ದುಬೈ ಸೇರಿಕೊಂಡಿದ್ದಾರೆ.
ಜಿಂಬಾಬ್ವೆಯಲ್ಲಿರುವ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್, ದೀಪಕ್ ಹೂಡಾ, ರಿಜರ್ವ್ ಪ್ಲೇಯರ್ ಅಕ್ಷರ್ ಪಟೇಲ್ ಇನ್ನೂ ಟೀಂ ಇಂಡಿಯಾ ಸೇರಿಕೊಂಡಿಲ್ಲ.
ಏಷ್ಯಾಕಪ್ ಟೂರ್ನಿ ಇದೇ 27 ರಿಂದ ಶುರುವಾಗಲಿದೆ. 28 ರಂದ ಇಡೀ ಕ್ರಿಕೆಟ್ ಲೋಕವೇ ಕಾಯುತ್ತಿರುವ ಇಂಡೋ – ಪಾಕ್ ಕದನ ನಡೆಯಲಿದೆ. ಇದು ವಿರಾಟ್ ಕೊಹ್ಲಿಯ 100ನೇ ಟಿ 20 ಪಂದ್ಯವಾಗಿದೆ.