Asia Cup 2023 Asia cup : ಏಷ್ಯಕಪ್ : ಒಂದೇ ಬಣದಲ್ಲಿ, ಭಾರತ ಪಾಕಿಸ್ತಾನ
2023ರ ಏಕದಿನ ಏಷ್ಯಾಕಪ್ ಟೂರ್ನಿ ಸೆಪ್ಟಂಬರ್ನಲ್ಲಿ ನಡೆಯಲಿದ್ದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಏಷ್ಯನ್ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾದ ಜಯ್ ಶಾ ಟ್ವೀಟರ್ನಲ್ಲಿ ಮಾಹಿತಿ ನೀಡಿದ್ದಾರೆ. 2023ರಲ್ಲಿ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದೆ. 6 ದೇಶಗಳು ಪ್ರಶಸ್ತಿಗಾಗಿ ಸೆಣಸಲಿವೆ.
4 ತಂಡಗಳು ಸೂಪರ್ 4ಕ್ಕೆ ಅರ್ಹತೆ ಪಡೆಯಲಿವೆ. ಫೈನಲ್ಗೂ 6 ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿವೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಟೂರ್ನಿಗೆ ನೇರ ಅರ್ಹತೆ ಪಡೆದಿವೆ. 6ನೇ ತಂಡ ಆಯ್ಕೆಯ ಅರ್ಹತಾ ಸುತ್ತು ನಡೆಯಲಿದೆ.
ಏಷ್ಯಾಕಪ್ ಆತಿಥ್ಯದ ಹಕ್ಕು ಪಾಕಿಸ್ತಾನದ ಕೈಯಲ್ಲಿದೆ. ಭಾರತ ತಂಡ ಅಲ್ಲಿಗೆ ಪ್ರಯಾಣಿಸಲು ಸಿದ್ಧವಿರದ ಕಾರಣ ಟೂರ್ನಿ ತಟಸ್ಥ ಸ್ಥಳದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಇನ್ನುಮುಂದಿನ ದಿನಗಳಲ್ಲಿ ಟೂರ್ನಿ ನಡೆಯುವ ಅಂತಿಮ ತೀರ್ಮಾನ ಏಷ್ಯ ಕ್ರಿಕೆಟ್ ಕೌನ್ಸಿಲ್ನಿಂದ ಹೊರ ಬೀಳಲಿದೆ.








