Asia Cup: ಸಚಿನ್, ಜಯಸೂರ್ಯ ಅವರ ಸರ್ವಕಾಲಿಕ ದಾಖಲೆ ಮುರಿಯುವತ್ತ ಕೊಹ್ಲಿ ಚಿತ್ತ
Asia Cup: Kohli wants to break Sachin, Jayasuriya’s all-time record
ಏಷ್ಯಾಕಪ್‌ನ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನ ಮುರಿದಿದ್ದ ವಿರಾಟ್ ಕೊಹ್ಲಿ, ಇದೀಗ ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ ಅವರ ಸರ್ವಕಾಲಿಕ ದಾಖಲೆ ಮುರಿಯುವ ಗುರಿ ಹೊಂದಿದ್ದಾರೆ.
ಇತ್ತೀಚಿಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕ ಬಾರಿಸುವ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ಸನತ್ ಜಯಸೂರ್ಯ ಅವರ ದಾಖಲೆ ಸರಿಗಟ್ಟಿದ್ದ ಕೊಹ್ಲಿ, ಇದೀಗ ಮತ್ತೊಮ್ಮೆ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ಹೆಸರಿನಲ್ಲಿರುವ ದಾಖಲೆಯನ್ನ ಮುರಿಯುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ತಯಾರಿ ಮಾಡಿಕೊಂಡಿರುವ ಕೊಹ್ಲಿ, ಬಾಂಗ್ಲಾದೇಶ ವಿರುದ್ಧ ಅಥವಾ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಈ ದಾಖಲೆ ಮುರಿಯುವ ತವಕದಲ್ಲಿದ್ದಾರೆ.
ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾಗಿ ಮಿಂಚಿದ್ದ ಸಚಿನ್ ತೆಂಡುಲ್ಕರ್ ಹಾಗೂ ಸನತ್ ಜಯಸೂರ್ಯ ಅವರುಗಳು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲಾ ಫಾರ್ಮ್ಯಾಟ್‌ನ ಪಂದ್ಯಗಳಲ್ಲಿ ಒಟ್ಟಾರೆ 5 ಶತಕಗಳನ್ನ ಬಾರಿಸಿದ ದಾಖಲೆ ಹೊಂದಿದ್ದಾರೆ. ಇವರ ನಂತರದಲ್ಲಿರುವ ಕೊಹ್ಲಿ, ಪ್ರೇಮದಾಸ ಸ್ಟೇಡಿಯಂನಲ್ಲಿ ಈವರೆಗೆ ಆಡಿರುವ 16 ಪಂದ್ಯಗಳಲ್ಲಿ 4 ಶತಕಗಳನ್ನ ದಾಖಲಿಸಿದ್ದಾರೆ. ಹೀಗಾಗಿ ಟೂರ್ನಿಯ ಇನ್ನೆರಡು ಪಂದ್ಯಗಳಲ್ಲಿ ಮತ್ತೊಂದು ಶತಕ ಬಾರಿಸಿದ್ದೇ ಆದಲ್ಲಿ ಟೀಂ ಇಂಡಿಯಾದ ಚೇಸ್ ಮಾಸ್ಟರ್, ಸಚಿನ್ ತೆಂಡುಲ್ಕರ್ ಮತ್ತು ಸನತ್ ಜಯಸೂರ್ಯ ಅವರ ದಾಖಲೆಯನ್ನ ಸರಿಗಟ್ಟಲಿದ್ದಾರೆ.
ಇದಲ್ಲದೇ ಪ್ರೇಮದಾಸ ಸ್ಟೇಡಿಯಂನಲ್ಲಿ 1000 ರನ್‌ಗಳಿಸುವತ್ತ ಕೂಡ ಕಿಂಗ್ ಕೊಹ್ಲಿ ಕಣ್ಣಿಟ್ಟಿದ್ದಾರೆ. ಪ್ರೇಮದಾಸ ಮೈದಾನದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೊಹ್ಲಿ, ಈವರೆಗೂ 911 ರನ್‌ಗಳನ್ನ ಕಲೆಹಾಕಿದ್ದು, 89 ರನ್‌ಗಳಿಸಿದರೆ ಒಂದು ಸಾವಿರ ರನ್‌ಗಳನ್ನ ಕೂಡ ಪೂರೈಸಲಿದ್ದಾರೆ.








