ಏಷ್ಯಾಕಪ್ ಕ್ರಿಕೆಟ್ ಸರಣಿಯ ಭಾರತ ಹಾಗೂ ಪಾಕ್ ನಡುವಿನ ಸೂಪರ್ 4 ಹಂತದ ಮೀಸಲು ದಿನದ ಪಂದ್ಯಕ್ಕೆ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣ ಸಜ್ಜಾಗಿತ್ತು. ಆದರೆ, ಇಂದು ಕೂಡ ಮಳೆಯ ಕಾಟ ಶುರುವಾಗಿದೆ.
ಹೀಗಾಗಿ ಪಂದ್ಯ ಆರಂಭ ಕೂಡ ಆಗಿಲ್ಲ. ಕೊಲಂಬೊ ಹವಾಮಾನ ಕುರಿತಂತೆ ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ವಿಡಿಯೊ ವಿವರಣೆ ನೀಡಿದ್ದಾರೆ. ಅದನ್ನು ಅವರು ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊಲಂಬೊದಲ್ಲಿ ರಾತ್ರಿ ಇಡೀ ಮಳೆ ಸುರಿದಿದೆ. ಈಗ ಮಳೆ ನಿಂತಿದೆ. ಆದರೆ, ವಾತಾವರಣ ಸಂಪೂರ್ಣವಾಗಿ ಶುಭ್ರವಾಗಿಲ್ಲ. ಮೋಡಗಳು ಕೂಡ ಆವರಿಸಿವೆ. ತುಂಪು ವಾತಾವರಣವಿದೆ. ಹೀಗಾಗಿ ಮತ್ತೆ ಅಭಿಮಾನಿಗಳಲ್ಲಿ ಹತಾಶೆಯಾಗಿದೆ.
ನಿನ್ನೆ ನಡೆದಿದ್ದ ಟಾಸ್ ವೇಳೆ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ 24.1 ಓವರ್ ಮುಗಿಸುವ ಹೊತ್ತಿಗೆ ಮಳೆ ಬಂದಿತ್ತು. ಸ್ವಲ್ಪ ಸಮಯದ ನಂತರ ಮಳೆ ನಿಂತಿತ್ತು. ಕ್ರೀಡಾಂಗಣದ ಸಿಬ್ಬಂದಿ ಪಿಚ್ ಒಣಗಿಸುವ ಕೆಲಸ ಮುಗಿಸಿ ಪಂದ್ಯಕ್ಕೆ ಸಿದ್ಧತೆ ಮಾಡಿದ್ದರು. 34 ಓವರ್ ಗಳಿಗೆ ಸಮೀತಗೊಳಿಸಿ ಪಂದ್ಯ ಆರಂಭಕ್ಕೆ ತಯಾರಿಯಲ್ಲಿದ್ದಾಗ ಮತ್ತೆ ಮಳೆ ಆರಂಭವಾಗಿತ್ತು. ಹೀಗಾಗಿ ಪಂದ್ಯವನ್ನು ಮುಂದೂಡಲಾಗಿತ್ತು. ಪಂದ್ಯ ನಿಲ್ಲುವ ವೇಳೆಗೆ ಭಾರತ 147ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು. ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಕ್ರೀಸ್ ನಲ್ಲಿದ್ದರು.








