2020ರ ಏಷ್ಯಾ ಕಪ್ ಟಿ-ಟ್ವೆಂಟಿಗೆ ಪಾಕ್ ಬದಲು ಶ್ರೀಲಂಕಾ ಆತಿಥ್ಯ…? ಅದ್ರೆ ಯಾವಾಗ ಅಂತ ಗೊತ್ತಿಲ್ಲ…
2020ರ ಟಿ-ಟ್ವೆಂಟಿ ಏಷ್ಯಾಕಪ್ ಟೂರ್ನಿಯನ್ನು ಸಂಘಟಿಸುವ ನಿರ್ಧಾರವನ್ನು ಏಷ್ಯನ್ ಕ್ರಿಕೆಟ್ ಸಮಿತಿ ಇನ್ನು ಅಂತಿಮಗೊಳಿಸಿಲ್ಲ. ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಆದ್ರೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಐಸಿಸಿ ತೀರ್ಮಾನವನ್ನು ತೆಗೆದುಕೊಂಡ ನಂತರ ಎಸಿಸಿಯು ತೀರ್ಮಾನವನ್ನು ಪ್ರಕಟಿಸಿದೆ.
ಈ ಹಿಂದೆ ನಿಗದಿಯಾಗಿದ್ದಂತೆ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯು ಸೆಪ್ಟಂಬರ್ ನಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದ್ರೆ ಕೊರೋನಾ ವೈರಸ್ ನಿಂದಾಗಿ ಎಲ್ಲಾ ಟೂರ್ನಿಗಳನ್ನು ಮುಂದೂಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆದ್ರೆ ಭಾರತವೂ ಪಾಕ್ ಪ್ರವಾಸ ಕೈಗೊಳ್ಳುತ್ತಿರಲಿಲ್ಲ. ಹೀಗಾಗಿ ತಟಸ್ಥ ತಾಣದಲ್ಲಿ ಟೂರ್ನಿಯನ್ನು ಸಂಘಟಿಸಬೇಕಿತ್ತು. ಇಲ್ಲದೆ ಇದ್ರೆ ಭಾರತದ ಅನುಪಸ್ಥಿತಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆಯಬೇಕಾಗಿತ್ತು.
ಈ ನಡುವೆ ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯನ್ನು ಸಂಘಟಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದೆ
ಬಂದಿದೆ. ಅಲ್ಲದೆ ಶ್ರೀಲಂಕಾದ ಪ್ರಸ್ತಾಪಕ್ಕೆ ಪಾಕ್ ಕ್ರಿಕೆಟ್ ಮಂಡಳಿಯು ಸಹಮತ ಸೂಚಿಸಿದೆ. ಈ ಬಗ್ಗೆ ನಾವು ಪಾಕ್ ಕ್ರಿಕೆಟ್ ಮಂಡಳಿಯ ಜೊತೆ ಚರ್ಚೆ ನಡೆಸಿದ್ದೇವೆ. ಪಾಕ್ ಕ್ರಿಕೆಟ್ ಮಂಡಳಿ ನಮ್ಮ ಪ್ರಸ್ತಾಪಕ್ಕೆ ಸಹಮತ ಸೂಚಿಸಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಶಮ್ಮಿ ಸಿಲ್ವಾ ಹೇಳಿದ್ದಾರೆ.
ಎಸಿಸಿ ಸಭೆಯು ಬಾಂಗ್ಲಾ ದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಝ್ಮುಲ್ ಹಸನ್ ಪಾಪೊನ್ ನೇತೃತ್ವದಲ್ಲಿ ನಡೆಯಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರು ಭಾಗಿಯಾಗಿದ್ದರು. ಅದೇ ರೀತಿ ಸಭೆಯಲ್ಲಿ 2022ರಲ್ಲಿ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಎಸಿಸಿ ಭಾಗಿಯಾಗುವುದರ ಬಗ್ಗೆಯೂ ಚರ್ಚೆ ನಡೆಸಲಾಯ್ತು.








