2021ರ ಎಎಫ್‍ಸಿ ಟೂರ್ನಿಯಲ್ಲಿ ಆಡಲಿರುವ ಈ ಮೂರು ಭಾರತದ ಕ್ಲಬ್ ತಂಡಗಳು…!
2021ರ ಏಷ್ಯನ್ ಫುಟ್ ಬಾಲ್ ಕಾನ್ಫೆಡೇಶನ್ (ಎಎಫ್‍ಸಿ) ಟೂರ್ನಿಯಲ್ಲಿ ಭಾರತದ ಮೂರು ಫುಟ್ ಬಾಲ್ ತಂಡಗಳು ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿವೆ. ಎಟಿಕೆ ಮೋಹನ್ ಬಗನ್, ಗೋವಾ ಫುಟ್ ಬಾಲ್ ಕ್ಲಬ್ ಮತ್ತು ನಮ್ಮ ನಾಡಿನ ಹೆಮ್ಮೆಯ ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡಗಳು ಭಾಗವಹಿಸಲಿವೆ.
ಎಎಫ್‍ಸಿ ಚಾಂಪಿಯನ್‍ಷಿಪ್‍ನ ಗ್ರೂಪ್ ಹಂತಕ್ಕೆ ಗೋವಾ ಫುಟ್ ಬಾಲ್ ಕ್ಲಬ್ ನೇರವಾಗಿ ಅರ್ಹತೆಯನ್ನು ಪಡೆದುಕೊಂಡಿವೆ. ಯಾಕಂದ್ರೆ ಗೋವಾ ಫುಟ್‍ಬಾಲ್ ಕ್ಲಬ್ 2019-20ನೇ ಸಾಲಿನ ಐಎಸ್‍ಎಲ್ ಟೂರ್ನಿಯನ್ನು ಗೆದ್ದುಕೊಂಡಿತ್ತು.
ಇನ್ನು ಎಟಿಕೆ ಮೋಹನ್ ಬಗನ್ ತಂಡ ಗ್ರೂಪ್ ಹಂತಕ್ಕೆ ನೇರ ಪ್ರವೇಶವನ್ನು ಪಡೆದುಕೊಂಡಿದೆ. ಮೋಹನ್ ಬಗನ್ ತಂಡ ಕೂಡ 2019-20ನೇ ಸಾಲಿನ ಐ ಲೀಗ್‍ನಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಹೀಗಾಗಿ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದೆ. ಹಾಗೇ ಮೋಹನ್ ಬಾಗನ್ ತಂಡ 2019-20ನೇ ಸಾಲಿನ ಐಎಸ್‍ಎಲ್
ಟೂರ್ನಿಯಲ್ಲಿ ರನ್ನರ್ ಅಪ್ ಕೂಡ ಆಗಿತ್ತು.
ಇನ್ನು ಬೆಂಗಳೂರು ಫುಟ್ ಬಾಲ್ ಕ್ಲಬ್ ತಂಡ ಪ್ಲೇ ಆಫ್ ಹಂತದಲ್ಲಿ ಆಡಬೇಕಿದೆ. 2019-20ನೇ ಸಾಲಿನ ಐಎಸ್‍ಎಲ್ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು.








