ಅಸ್ಸಾಂ : ತಾಲೀಬಾನಿಗಳನ್ನ ಸಪೋರ್ಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ – 14 ಜನರ ಬಂಧನ
ಅಸ್ಸಾಂ: ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಕೆಲ ವಿಕೃತ ಮನಸ್ಥಿತಿಯುಳ್ಳವರು ಭಾರತದಲ್ಲಿ ನೆಲೆಸಿರುವ ಕೆಲ ಕಿಡಿಗೇಡಿಗಳು ಇಂತಹ ನೀಚ ಕೃತ್ಯವನ್ನ ತಾಲೀಬಾನಿಗಳನ್ನ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ಇದೀಗ ಜೈಲು ಸೇರಿದ್ದಾರೆ. ಹೌದು.. ಸೋಷಿಯಲ್ ಮೀಡಿಯಾದಲ್ಲಿ ತಾಲೀಬಾನ್ ಬೆಂಬಲಿಸಿ ಪೋಸ್ಟ್ ಹಾಕಿದ ಆರೋಪದಡಿ ಅಸ್ಸಾಂನಲ್ಲಿ ಒಟ್ಟು 14 ಮಂದಿಯನ್ನ ಬಂಧಿಸಿರುವುದಾಗಿ ವರದಿಯಾಗಿದೆ.
ಬರ್ಪೇಟಾ, ಧುಬ್ರಿ, ಕಮರೂಪ್ ಮೆಟ್ರೋಪಾಲಿಟನ್, ಕರಿಮ್ ಗಂಜ್ ಜಿಲ್ಲೆಗಳ ನಿವಾಸಿಗಳನ್ನ ಬಂಧಿಸಲಾಗಿದೆ. ಇನ್ನೂ ಇಂತಹ ಪೋಸ್ಟ್ ಹಾಕುತ್ತಾ ತಾಲೀಬಾನಿಗಳನ್ನ ಸಪೋರ್ಟ್ ಮಾಡ್ತಿರುವ ಕಿಡಿಗೇಡಿಗಳನ್ನ ಬಂಧಿಸಲು ಪೊಲೀಸರು ಬುಧವಾರದಿಂದಲೇ ಆಪರೇಷನ್ ಶುರುಮಾಡಿದ್ದಾರೆ. ಬಂಧಿತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ(ನಿಯಂತ್ರಣ) ಕಾಯ್ದೆ, ಮಾಹಿತ ತಂತ್ರಜ್ಞಾನ ಕಾಯ್ದೆ ಮತ್ತು ಸಿಆರ್ಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.