ಅಸ್ಸಾಂ ಪ್ರವಾಹ – 7 ಜನ ಸಾವು, ಮಳೆ ತೀವ್ರತೆಗೆ ತತ್ತರಿಸಿದ 2 ಲಕ್ಷ ಜನ…
ಅಸ್ಸಾಂನಲ್ಲಿ, ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ವಸತಿ ಹಾಗೂ ಕೃಷಿ ಜಮೀನುಗಳಿಗೆ ನೀರು ನುಗ್ಗಿದೆ. ಅಸ್ಸಾಂನಲ್ಲಿ ಕಳೆದ 24 ಗಂಟೆಗಳಲ್ಲಿ 17.1 ಮಿಮೀ ಮಳೆಯಾಗಿದೆ. 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದ ತೀವ್ರತೆಗೆ ತತ್ತರಿಸಿದ್ದಾರೆ.
ಪ್ರವಾಹ ಮತ್ತು ಭೂಕುಸಿತದಿಂದ 7 ಜನರು ಸಾವನ್ನಪ್ಪಿದ್ದರೆ, ಕ್ಯಾಚಾರ್ ಜಿಲ್ಲೆಯಲ್ಲಿ 6 ಜನರು ನಾಪತ್ತೆಯಾಗಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ 6 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಪ್ರವಾಹ ಪೀಡಿತ 33 ಸಾವಿರ ಜನರು ಪರಿಹಾರ ಶಿಬಿರಗಳಲ್ಲಿ ತಂಗಿದ್ದಾರೆ. ಜಿಲ್ಲಾಡಳಿತದಿಂದ ಸಂತ್ರಸ್ತ ಜನರಿಗೆ ಅಕ್ಕಿ, ಉಪ್ಪು, ಬೇಳೆ, ಕುಡಿಯುವ ನೀರು, ಸಾಸಿವೆ ಎಣ್ಣೆ ಮತ್ತು ಬೇಬಿ ಫುಡ್ ವಿತರಿಸಲಾಗುತ್ತಿದೆ. ಗುವಾಹಟಿ ನಗರದ ಕೆಲವು ಪ್ರದೇಶಗಳಲ್ಲಿ ಜಲಾವೃತವಾಗಿರುವ ಬಗ್ಗೆ ವರದಿಯಾಗಿದೆ.
Assam: 7 killed while over 2 lakh people affected in 20 districts due to floods, landslides triggered by incessant rain








