`ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ’
ದಿಸ್ಪುರ್ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸ್ಸಾಂನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಟೀ ಎಸ್ಟೇಟ್ ಗಳಿಗೆ ಭೇಟಿ ನೀಡಿ ಅಲ್ಲಿನ ಮಹಿಳಾ ಕಾರ್ಮಿಕರೊಂದಿಗೆ ಸಮಯ ಕಳೆಯುತ್ತಾ, ಮತಬೇಟೆ ಶುರು ಮಾಡಿದ್ದಾರೆ.
ಈ ಮಧ್ಯೆ ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಗೃಹಿಣಿ ಸಮ್ಮಾನ್ ಯೋಜನೆ ಜಾರಿ ಮಾಡುವುದಾಗಿ ಘೋಷಣೆ ಮಾಡಿರುವ ಅವರು ಆ ಯೋಜನೆ ಮೂಲಕ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನ ನೀಡುತ್ತೇವೆ ಅಂತಾ ತಿಳಿಸಿದ್ದಾರೆ.
ಈ ವೇಳೆ ತೇಜಪುರದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಭರಪೂರ ಭರವಸೆಗಳನ್ನ ನೀಡಿದರು.
ನಾವು ಅಧಿಕಾರಕ್ಕೆ ಬಂದ್ರೆ ಟೀ ಎಸ್ಟೇಟ್ ಗಳಲಿ ಕೆಲಸ ಮಾಡೋ ಮಹಿಳೆಯರಿಗೆ ಪ್ರತಿದಿನ 365 ರೂ ನೀಡುತ್ತೇವೆ. ಹಾಗೆ ಗೃಹಿಣಿ ಸಮ್ಮಾನ್ ಯೋಜನೆ ಮೂಲಕ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತೇವೆ ಅಂತಾ ಘೋಷಣೆ ಮಾಡಿದ್ರು. ಅಲ್ಲದೆ 5 ಲಕ್ಷ ಹೊಸ ಸರ್ಕಾರಿ ಕೆಲಸಗಳನ್ನು ಸೃಷ್ಟಿಸುತ್ತೇವೆ ಎಂದು ಅಲ್ಲಿ ನೆರೆದಿದ್ದವರಿಗೆ ಭರವಸೆ ನೀಡಿದರು.
ಇದಿಷ್ಟೆ ಅಲ್ಲದೇ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದ ಪ್ರಿಯಾಂಕಾ ವಾದ್ರಾ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇಲ್ಲಿ ಸಿಎಎಯನ್ನು ಜಾರಿ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ರು.