ಅಂಬುಲೆನ್ಸ್ ಸಿಗದೇ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಕಿಡ್ನಾಪ್ , ಅತ್ಯಾಚಾರ – ಕಾಮುಕರಿಂದ ಮಗಳು ಎಸ್ಕೇಪ್
ಅಸ್ಸಾಂ : ಆಂಬ್ಯುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ ನಂತರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಇಬ್ಬರು ಕಾಮಾಂಧರು ಅತ್ಯಾಚಾರವೆಸಗಿದ ಘಟನೆ ಅಸ್ಸಾಂನ ಚರಾಡಿಯೋದಲ್ಲಿ ನಡೆದಿದೆ. ಮಹಿಳೆ ತನ್ನ ಮಗಳೊಂದಿಗೆ ಕೊರೊನಾ ಟೆಸ್ಟ್ ಮಾಡಿಸಲೆಂದು ಆಸ್ಪತ್ರೆಗೆ ತೆರಳಿದ್ದರು. ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಎಂದು ವರದಿ ಬಂದ ಬಳಿಕ ಮಹಿಳೆಗೆ ಆಸ್ಪತ್ರೆಯವರು ಅಂಬುಲೆನ್ಸ್ ನೀಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಸುಕಿನ ಜಾವ 2.30ರ ಸುಮಾರಿಗೆ ಮಹಿಳೆ ಮಗಳೊಂದಿಗೆ ನಡೆದುಕೊಂಡು ಮನೆ ಕಡೆ ವಾಪಸ್ಸಾಗುತ್ತಿದ್ದಾಗ ಅಡ್ಡಗಟ್ಟಿರುವ ಕಾಮುಕರು ಮಹಿಳೆಯನ್ನು ಕಿಡ್ನಾಪ್ ಮಾಡಿ , ಟೀ ಗಾರ್ಡನ್ ಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಆಸ್ಪತ್ರೆಯಿಂದ ನಮ್ಮ ಮನೆಗೆ ತೆರಳಲು ಸುಮಾರು 25 ಕಿ.ಮೀ ದೂರವಿತ್ತು. ಹೀಗಾಗಿ ನಾವು ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದೆವು. ಈ ವೇಳೆ ಇಬ್ಬರು ವ್ಯಕ್ತಿಗಳು ನಮ್ಮನ್ನು ಫಾಲೋ ಮಾಡುತ್ತಾ ಬಂದಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ನಾವು ಓಡಿ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅಮ್ಮ ಕಾಮುಕರ ಕೈಗೆ ಸಿಕ್ಕಿಹಾಕಿಕೊಂಡರು. ನಾನು ತಪ್ಪಿಸಿಕೊಂಡು ಬಂದು ಗ್ರಾಮಸ್ಥರಿಗೆ ಘಟನೆ ಬಗ್ಗೆ ವಿವರಿಸಿದೆ. ಘಟನೆ ನಡೆದ ಸುಮಾರು 2 ಗಂಟೆಯ ನಂತರ ತಾಯಿ ಸಿಕ್ಕಿದರು ಎಂದು ಸಂತ್ರಸ್ತೆಯ ಮಗಳು ಪ್ರತಿಕ್ರಿಯೆ ನೀಡಿದ್ದಾರೆ.