ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮುಂದುವರಿದ ಸ್ಥಳೀಯ ರಾಜಕೀಯ ನಾಯಕರ ಹತ್ಯೆ. ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಮತ್ತು ಸಂದೇಹಗಳನ್ನು ಹುಟ್ಟುಹಾಕಿದೆ. ಕರ್ತವ್ಯಲೋಪದಡಿ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಛಪ್ರೌಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ ಅನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದರೆ.
ನವದೆಹಲಿ: ಬಿಜೆಪಿ ಮಾಜಿ ಜಿಲ್ಲಾ ಮುಖ್ಯಸ್ಥ ಸಂಜಯ್ ಖೋಖರ್ ಅವರು ಯುಪಿ ಯ ಬಾಗ್ಪತ್ನಲ್ಲಿ ಬೆಳಿಗ್ಗೆ ತನ್ನ ಹೊಲದಲ್ಲಿ ನಡೆದಾಡುವಾಗ ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಸ್ಥಳೀಯ ಪೊಲೀಸ್ ತಂಡ ಘಟನ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡುತ್ತಿದ್ದಾರೆ
ಖೋಖರ್ ಅವರ ಎದೆ ಮತ್ತು ಕಿವಿಗೆ ಪೆಟ್ಟಾಗಿದ್ದು ಖೋಖರ್ ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಖೋಖರ್ ಅವರ ನಿಧನದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆ ಚಾಪ್ರೌಲಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ತಿಂಗಳು,ಜುಲೈ 7 ರಂದು ಹಿರಿಯ ಆರ್ ಜೆ ಡಿ ಮುಖಂಡ ದೇಶಪಾಲ್ ಖೋಖರ್ ಅವರನ್ನು ಬಾಗ್‌ಪತ್‌ನಲ್ಲಿ ಇದೇ ರೀತಿ ಕೊಲ್ಲಲಾಯಿತು. ಇದು ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಮತ್ತು ಸಂದೇಹಗಳನ್ನು ಹುಟ್ಟುಹಾಕಿದೆ . ರಾಜಕೀಯ ನಾಯಕರು ಮತ್ತು ಸ್ಥಳೀಯ ಗೂಂಡಾಗಳ ನಡುವಿನ ಸಂಬಂಧ ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ. ಕರ್ತವ್ಯಲೋಪದಡಿ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಛಪ್ರೌಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ ಅನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದರೆ.
ಕಳೆದ ಎರಡು ದಿನಗಳ ಹಿಂದೆ ಬುಡ್ಗಾಮ್ ಒಬಿಸಿ ಮೋರ್ಚಾ ದ ಬಿಜೆಪಿ ಜಿಲ್ಲಾಧ್ಯಕ್ಷವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂಡಿದ್ದರು.








