ಜೈಪುರ: ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ‘ಜೈ ಶ್ರೀ ರಾಮ್’ ಮತ್ತು ‘ಮೋದಿ ಜಿಂದಾಬಾದ್’ ಎಂದು ಜೈಕಾರ ಕೂಗಲು ನಿರಾಕರಿಸಿದ ಕಾರಣ ತನ್ನ ಮೇಲೆ ಹಲ್ಲೆ ನಡೆಸಿದರು ಎಂದು 52 ವರ್ಷದ ಆಟೋರಿಕ್ಷಾ ಚಾಲಕ ಗಪ್ಪರ್ ಅಹ್ಮದ್ ಕಚ್ಚಾವಾ ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ವರದಿ ಮಾಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್ ನಲ್ಲಿ ಹೆಸರಿಸಲಾದ ಆರೋಪಿಗಳನ್ನು ರಾಜಸ್ಥಾನ್ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಹತ್ತಿರದ ಹಳ್ಳಿಗೆ ಪ್ರಯಾಣಿಕರನ್ನು ಇಳಿಸಿ ಹಿಂದಿರುಗುತ್ತಿದ್ದಾಗ ಆರೋಪಿಗಳು ಆಟೋ ಚಾಲಕನನ್ನು ನಿಲ್ಲಿಸಿ ‘ಜೈ ಶ್ರೀ ರಾಮ್’ ಮತ್ತು ‘ಮೋದಿ ಜಿಂದಾಬಾದ್’ ಎಂದು ಹೇಳುವಂತೆ ಬಲವಂತವಾಗಿ ಒತ್ತಾಯಿಸಿದರು. ಬಳಿಕ ನಿರಾಕರಿಸಿದ ಕಾರಣ ಮಾರಣಾಂತಿಕವಾಗಿ ಹಲ್ಲೆ ಮಾಡಿದಲ್ಲದೆ ಆರೋಪಿಗಳು ತಮ್ಮ ಕೈಗಡಿಯಾರ ಮತ್ತು ಹಣವನ್ನು ಕದ್ದಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ರಾಜಸ್ತಾನ ಪೊಲೀಸರು ಸೂಕ್ತ ತನಿಖೆಯ ನಂತರ ಘಟನೆಯ ಸತ್ಯ ಸತ್ಯತೆ ಹೊರಬೀಳಲಿದೆ.








