ಮರದ ರೆಂಬೆ ಕಡಿದರು ಎಂಬ ಕಾರಣಕ್ಕೆ ಕುರಿಗಾಹಿ ಹಾಗೂ ನಾಲ್ವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಂಬರಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಕುರಿಗಾಹಿ ರವಿ ಎಂಬಾತ ಕುರಿ ಕಟ್ಟುವ ಗೂಟಕ್ಕಾಗಿ ಮರದ ರೆಂಬೆ ಕಡಿದಿದ್ದ ಎನ್ನಲಾಗಿದೆ. ಈ ರೆಂಬೆ ಕಡಿದ ಜಾಗದಲ್ಲಿ ಅನ್ಯ ಧರ್ಮದ ಸ್ಮಶಾನ ಇದೆ. ಇದೇ ವಿಚಾರಕ್ಕೆ ಅನ್ಯಕೋಮಿನ ಯುವಕರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದವರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.








