ಅಸ್ಸಾಂ , ಪಶ್ಚಿಮಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ 2ನೇ ಹಂತದ ಮತದಾನ..!
ಅಸ್ಸಾಂ / ಪಶ್ಚಿಮಬಂಗಾಳ : ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಇಂದು ಮುಂಜಾನೆಯಿಂದ 2ನೇ ಹಂತದ ಚುನಾವಣೆ ಬಿರುಸಿನಿಂದ ನಡೆದಿದೆ. ಅದ್ರಲ್ಲೀ ಬಿಜೆಪಿ ಹಾಗೂ ಟಿಎಂಸಿ ನಡುವೆ ಜಿದ್ದಾಜಿದ್ದಿನ ಕಣವಾಗಿದೆ ಪಶ್ಚಿಮಬಂಗಾಳ.., ಸಾಕಷ್ಟು ಹೈಡ್ರಾಮಾಗಳ ನಡುವೆ ಕೊನೆಗೂ 2ನೇ ಹಂತದ ಚುನಾವಣೆ ನಡೆಯುತ್ತಿದೆ. ಈ ನಡುವೆ ಮುಂಜಾನೆಯಿಂದಲೇ ಒಂದಲ್ಲಾ ಒಂದು ಅಹಿತಕರ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.
ಪಶ್ಚಿಮ ಬಂಗಾಳದಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 76,07,667 ಮತದಾರರು 8,332 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸುತ್ತಿದ್ದಾರೆ.
ಅಸ್ಸಾಂನಲ್ಲಿ 39 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಟ್ಟು 345 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 73,44,631 ಜನ ಮತ ಚಲಾಯಿಸಲಿದ್ದಾರೆ. ಒಟ್ಟು 10,592 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!
ಇಂದು ದೇಶದಲ್ಲಿ ಕೊರೊನಾ ಮಹಾಸ್ಫೋಟ – ಒಂದೇ ದಿನ 72 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆ..!