ರಾಜ್ಯದಲ್ಲಿ ಹೊಸದಾಗಿ 263 ಅಂಬ್ಯುಲೆನ್ಸ್ ವಾಹನ ಖರೀದಿ – ಕೆ ಸುಧಾಕರ್..
ಇಂದು ನಡೆದ ವಿಧಾನಸಭಾ ಕಲಾಪದಲ್ಲಿ ಸದಸ್ಯ ಸೋಮನಗೌಡ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ರಾಜ್ಯದಲ್ಲಿ ಹೊಸದಾಗಿ 263 ಅಂಬ್ಯುಲೆನ್ಸ್ ವಾಹನಗಳ ಖರೀದಿಗೆ ಸರ್ಕಾರ ಮುಂದಾಗಿದ್ದು, ಅಗತ್ಯ ಇರುವ ಕಡೆ ಅಂಬ್ಯುಲೆನ್ಸ್ ಸೇವೆ ಒದಗಿಸಲು ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 7 ತಾಲೂಕುಗಳ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆದಿದ್ದು, ಒಟ್ಟು 35 ಕೋಟಿ ರೂಪಾಯಿ ಆರ್ಥಿಕ ಸಂಪನ್ಮೂಲ ಅವಶ್ಯಕತೆ ಇದ್ದು, 5 ಕೋಟಿ ರೂಪಾಯಿ ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಲಭ್ಯತೆ ಅನುಸಾರ ವೈದ್ಯಕೀಯ ಸೇವೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸದಸ್ಯ ಟಿ.ಡಿ. ರಾಜೇಗೌಡ ಪ್ರಶ್ನೆಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯವಿರುವ ಅಂಬ್ಯುಲೆನ್ಸ್ ವಾಹನ ಇನ್ನೊಂದು ತಿಂಗಳೊಳಗೆ ನೀಡಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್ ಸದನಕ್ಕೆ ಭರವಸೆ ನೀಡಿದರು.
Assembly session: Purchase of 263 new ambulance vehicles in the state – K Sudhakar..








