ನದಿಯ ಮಧ್ಯಭಾಗದಲ್ಲಿದ್ದ ದೋಣಿಗೆ ಬೆಂಕಿ – 32 ಜನ ಸಾವು….
ಬಾಂಗ್ಲಾದೇಶದಲ್ಲಿ ನದಿಯ ಮಧ್ಯಭಾಗದಲ್ಲಿ ನಿಂತಿದ್ದ ಹಡಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಶುಕ್ರವಾರ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ.
ಬೆಂಕಿಯಲ್ಲಿ 100 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಸುಮಾರು 1,000 ಜನರು ಪ್ರಯಾಣಿಸುತ್ತಿದ್ದ ಮೂರು ಅಂತಸ್ಥಿನ ಒಬಿಜಾನ್ ದೋಣಿಯು ಢಾಕಾದಿಂದ ಬರ್ಗುನಾ ಜಿಲ್ಲೆಗೆ ಹೋಗುತ್ತಿತ್ತು.
“ಮೂರು ಅಂತಸ್ತಿನ ಓಬಿಜಾನ್ 10 ನದಿಯ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ನಾವು 32 ಶವಗಳನ್ನು ಹೊರತೆಗೆದಿದ್ದೇವೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ಹೆಚ್ಚಿನವರು ಬೆಂಕಿಯಿಂದ ಮತ್ತು ಕೆಲವರು ನದಿಗೆ ಹಾರಿದ ನಂತರ ಮುಳುಗಿ ಸಾವನ್ನಪ್ಪಿದ್ದಾರೆ” ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಯಿನುಲ್ ಇಸ್ಲಾಂ ಹೇಳಿದ್ದಾರೆ.
ರಾಜಧಾನಿ ಢಾಕಾದಿಂದ ದಕ್ಷಿಣಕ್ಕೆ 250 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಗ್ರಾಮೀಣ ಪಟ್ಟಣವಾದ ಜಕಾಕತಿ ಬಳಿ ಮುಂಜಾನೆ ಈ ಘಟನೆ ನಡೆದಿದೆ.








