ಅಟಲ್ ಬಿಹಾರಿ ವಾಜಪೇಯಿ ಹೆವಿ ಡ್ರಿಂಕರ್ : ಪ್ರಿಯಾಂಕ್ ಖರ್ಗೆ
ಕಲಬುರಗಿ : ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.
ಕಲಬುರಗಿಯಲ್ಲಿ ಮಾತನಾಡುತ್ತಾ, ಅಟಲ್ ಬಿಹಾರಿ ವಾಜಪೇಯಿ ಅವರು ಹೆವಿ ಡ್ರಿಂಕರ್ ಆಗಿದ್ದರು, ಪ್ರತಿದಿನ ಸಂಜೆ ಅವರಿಗೆ ಎರಡು ಪೆಗ್ ಡ್ರಿಂಕ್ಸ್ ಬೇಕಾಗಿತ್ತು, ಹಾಗಂತ ಬಾರ್ ಗೆ ವಾಜಪೇಯಿ ಹೆಸರಿಡುತ್ತಾರೆ ಎಂದು ಹೇಳುವ ಮೂಲಕ ಇಂದಿರಾ ಬಾರ್ ತೆಗೆಯಿರಿ ಎಂದ ರವಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ಅಲ್ಲದೆ ವೀರ ಸಾವರ್ಕರ್ ವಿಚಾರವಾಗಿಯೂ ಬಿಜೆಪಿ ವಿರುದ್ಧ ಕಿಡಿಕಾರಿರುವ ಪ್ರಿಯಾಂಕ್, ದೇಶಕ್ಕೆ ವೀರ ಸಾವರ್ಕರ್ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಿ ಟಿ ರವಿ ಹೇಳಿಕೆ ಬಗ್ಗೆ ಮಾತನಾಡಿ, ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದರೇ ಇದೇ ಆಗುವುದು. ಗೋಡ್ಸೆಯನ್ನು ನಂಬುವ ಇವರು ಮಹಾತ್ಮ ಗಾಂಧಿಯನ್ನು ನಂಬುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.









