ಗೋ ಹತ್ಯೆ ನಿಷೇಧ : ಮೃಗಾಲಯದಲ್ಲಿ ಹುಲಿ, ಚಿರತೆ, ಸಿಂಹ ಉಪವಾಸ
ಬಳ್ಳಾರಿ : ಇದುವರೆಗೆ ಮನುಷ್ಯರು ಮಾತ್ರ ಗೋ ಹತ್ಯೆ ನಿಷೇದ ಕಾಯ್ದೆ ವಿರುದ್ಧ ಹೋರಾಟ ನಡೆಸುತಿದ್ರು. ಇದೀಗ ಮೃಗಾಲಯದ ಪ್ರಾಣಿಗಳು ಕೂಡ ಪ್ರತಿಭಟಿಸಲು ಪ್ರಾರಂಭಿಸಿವೆ.
ಗೋ ಹತ್ತೆ ನಿಷೇದ ಕಾಯ್ದೆ ಜಾರಿಗೆ ತಂದ ಸರ್ಕಾರಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಮಲಾಪುರ ಅಟಲ್ ಬಿಹಾರಿ ವಾಜ್ಪೇಯಿ ಜೊಲಾಜಿಕಲ್ ಪಾರ್ಕಿಗೂ ಗೋ ಹತ್ಯೆ ನಿಷೇಧದ ಬಿಸಿ ತಟ್ಟಿದೆ.
ಇಷ್ಟು ದಿನ ದನದ ಮಾಂಸ ತಿನ್ನುತ್ತಿದ್ದ ಮಾಂಸ ಹಾರಿ ಪ್ರಾಣಿಗಳಿಗೆ ಇದೀಗ ಕೋಳಿ ಮಾಂಸವೇ ಗತಿಯಾಗಿದೆ.
ಹೌದು..! ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಅಟಲ್ ಬಿಹಾರಿ ವಾಜ್ಪೇಯಿ ಜೂಲಾಜಿಕಲ್ ಪಾರ್ಕ್ ನಲ್ಲಿ ಸಿಂಹ, ಹುಲಿ, ಸೇರಿದಂತೆ ಇನ್ನಿತರ ಮಾಂಸ ಹಾರಿ ಪ್ರಾಣಿಗಳು ಕೋಳಿ ಮಾಂಸ ತಿನ್ನಲು ಹಿಂದೇಟು ಹಾಕುತ್ತಿವೆ.
ಪ್ರಾಣಿಗಳು ಕೋಳಿ ಮಾಂಸ ಸೇವಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ದೊಡ್ಡ ತಲೆನೋವು ಎದುರಾಗಿದೆ.
ಈ ಹಿನ್ನೆಲೆ ಮೃಗಾಲಯಗಳಿಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನ್ವಯಿಸುವುದು ಬೇಡ ಎಂದು ಸರ್ಕಾರಕ್ಕೆ ಮನವಿಮಾಡಿಕೊಂಡಿದ್ದಾರೆ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು.
ಪ್ರಾಣಿಗಳ ಉಳಿವಿಗಾಗಿ ಮೃಗಾಲಯಗಳಿಗೆ ಈ ಕಾನೂನಿನಿಂದ ವಿನಾಯಿತಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಅಟಲ್ ಬಿಹಾರಿ ವಾಜ್ಪೇಯಿ ಜೂಲಾಜಿಕಲ್ ಪಾರ್ಕ್ ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್.ಕಿರಣ್ ಕುಮಾರ್, ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.
ಸಿಂಹ, ಹುಲಿ, ಗುಳ್ಳೆ ನರಿ, ಕತ್ತೆ ಕಿರುಬ, ತೋಳ ಪ್ರಾಣಿಗಳು ಸೇರಿ ಮೃಗಾಲಯದಲ್ಲಿ ಒಟ್ಟು 34 ಮಾಂಸಹಾರಿ ಪ್ರಾಣಿಗಳನ್ನ ಹೊಂದಿರುವ ಮೃಗಾಲಯ ಇದಾಗಿದೆ.
ಈ ಮುಂಚೆ ಗಂಡು ಹುಲಿಗೆ ದಿನಕ್ಕೆ 10 ಕೆಜಿ ಹಾಗೂ ಹೆಣ್ಣು ಹುಲಿಗೆ 8 ಕೆಜಿ ದನದ ಮಾಂಸ ನೀಡಲಾಗುತ್ತಿತ್ತು. ಈಗ ಕೋಳಿ ಮಾಂಸ ನೀಡಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









