ADVERTISEMENT
Monday, February 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಟಿಎಸ್‌ ಅಟ್ಯಾಕರ್ಸ್‌ ತಂಡ ಚೊಚ್ಚಲ ಆವೃತ್ತಿಯ ಸಿಎಂ ಕಪ್‌ ಚಾಂಪಿಯನ್‌

admin by admin
February 23, 2026
in Newsbeat, Sports, ಕ್ರೀಡೆ
ATS Attackers team wins inaugural CM Cup-2026

ATS Attackers team wins inaugural CM Cup-2026

Share on FacebookShare on TwitterShare on WhatsappShare on Telegram

ಎಟಿಎಸ್‌ ಅಟ್ಯಾಕರ್ಸ್‌ ತಂಡ ಚೊಚ್ಚಲ ಆವೃತ್ತಿಯ ಸಿಎಂ ಕಪ್‌ ಚಾಂಪಿಯನ್‌

ಬೆಂಗಳೂರು: ಸರ್ವಾಂಗೀಣ ಆಟ ಪ್ರದರ್ಶಿಸಿದ ಎಟಿಎಸ್‌ ಅಟ್ಯಾಕರ್ಸ್‌ ತಂಡ 2026ರ ಚೊಚ್ಚಲ ಸಿಎಂ ಕಪ್‌ ಬ್ಯಾಡ್ಮಿಂಟನ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

Related posts

The only standing Bala Ganapati in the world, special information about the Idagunji area that no one has seen

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ

February 23, 2026
ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

February 23, 2026

9 ಡ್ರೀಮ್ಸ್‌ ಸಂಸ್ಥೆ ಆಯೋಜಿಸಿದ್ದ ಪ್ರತಿಷ್ಠಿತ ಸಿಎಂ ಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪ್ರೋವಿನ್‌ ಪ್ಯಾಂಥರ್ಸ್‌ ತಂಡವನ್ನು ಮಣಿಸಿ ಎಟಿಎಸ್‌ ಅಟ್ಯಾಕರ್ಸ್‌ ತಂಡ ಗೆಲುವಿನ ನಗೆ ಬೀರಿತು. ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹಾಗೂ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ ಅವರು ಚಾಂಪಿಯನ್‌ ಹಾಗೂ ರನ್ನರ್ ಅಪ್ ತಂಡಗಳಿಗೆ ಪ್ರಶಸ್ತಿ ವಿತರಿಸಿದರು. ಸಮಾರೋಪ ಸಮಾರಂಭ ದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್ ಬೆಳ್ಳಿತಟ್ಟೆ. ಕವಳ ಚಿತ್ರದ ನಿರ್ಮಾಪಕ ಬಿ. ಲೋಕೇಶ್ ಉಪಸ್ಥಿತರಿದ್ದರು.

ಶನಿವಾರ ಮತ್ತು ಭಾನುವಾರ ಕನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಅಂಗಣದಲ್ಲಿ ನಡೆದ ಬ್ಯಾಡ್ಮಿಂಟನ್‌ ಟೂರ್ನಿ ಅದ್ಧೂರಿಯಾಗಿ ನಡೆಯಿತು. ಟ್ರೋಫಿಗಾಗಿ ಕಣಕ್ಕಿಳಿದಿದ್ದ 8 ತಂಡಗಳು ಎರಡೂ ದಿನವೂ ರೋಚಕವಾದ ಪಂದ್ಯಗಳಿಗೆ ಸಾಕ್ಷಿಯಾದವು.

ಲೀಗ್‌ ಹಂತದಲ್ಲಿ 8 ತಂಡಗಳ ಪೈಕಿ ಎ ಬಣದಲ್ಲಿ ಇನ್‌ಸ್ಪೈರ್‌ ಚಾಲೆಂಜರ್ಸ್‌, ಎಲೈಟ್‌ ಬ್ಯಾಡ್ಮಿಂಟನ್‌ ಕ್ಲಬ್‌, ಎಸ್ಥೆಟಿಕ್‌ ಅಟ್ಯಾಕರ್ಸ್‌, ಕೆಫೆ ದಿವ್ಯಂ ತಂಡಗಳು ಹಾಗೂ ಬಿ ಬಣದಲ್ಲಿ ಎಟಿಎಸ್‌ ಅಟ್ಯಾಕರ್ಸ್‌, ಪ್ರೋವಿನ್‌ ಪ್ಯಾಂಥರ್ಸ್‌, ಟೆಲಿಕಾಂ ಸ್ಕೈ ಸ್ಟ್ರೈಕರ್ಸ್‌, ಕೆಜಿಎಫ್‌ ಸ್ಮಾಶರ್ಸ್‌ ತಂಡಗಳು ಕಣಕ್ಕಿಳಿದಿದ್ದವು. ಆ ಪೈಕಿ ಇನ್‌ಸ್ಪೈರ್‌ ಚಾಲೆಂಜರ್ಸ್‌, ಎಲೈಟ್‌ ಬ್ಯಾಡ್ಮಿಂಟನ್‌ ಕ್ಲಬ್‌ ಮತ್ತು ಎಟಿಎಸ್‌ ಅಟ್ಯಾಕರ್ಸ್‌, ಪ್ರೋವಿನ್‌ ಪ್ಯಾಂಥರ್ಸ್‌ಗಳು ಸೆಮಿಫೈನಲ್‌ಗೆ ಪ್ರವೇಶಿಸಿದ್ದವು.
ಮೊದಲ ಸೆಮಿಫೈನಲ್‌ನಲ್ಲಿ ಎಟಿಎಸ್‌ ಅಟ್ಯಾಕರ್ಸ್‌ ತಂಡವು ಎಲೈಟ್‌ ಬ್ಯಾಡ್ಮಿಂಟನ್‌ ಕ್ಲಬ್‌ ತಂಡವನ್ನು ಮಣಿಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ ಪ್ರೋವಿನ್‌ ಪ್ಯಾಂಥರ್ಸ್‌ ತಂಡವು ಇನ್‌ಸ್ಪೈರ್‌ ಚಾಲೆಂಜರ್ಸ್‌ ತಂಡವನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ ಪ್ರವೇಶಿಸಿದವು.
ಫೈನಲ್ ಹಣಾಹಣಿಯಲ್ಲಿ ಎರಡೂ ತಂಡಗಳ ಆಟಗಾರರು ಸಮಬಲದ ಹೋರಾಟ ಪ್ರದರ್ಶಿಸಿದರು. ಅಂತಿಮವಾಗಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಎಟಿಎಸ್‌ ಅಟ್ಯಾಕರ್ಸ್‌ ತಂಡ ಮೊದಲ ಆವೃತ್ತಿಯ ಸಿಎಂ ಕಪ್‌ನ್ನು ಕೈವಶ ಮಾಡಿಕೊಂಡಿತು.
ಟೂರ್ನಿಯ ಅಂತಿಮ ದಿನವಾದ ಭಾನುವಾರ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್, ಸಕ್ರಾ ವರ್ಲ್ಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಯುಚಿ ನಗಾನೋ ಸೇರಿದಂತೆ ಹಲವು ಗಣ್ಯರು ಪಂದ್ಯಾವಳಿ ವೀಕ್ಷಿಸಿ ಶುಭ ಹಾರೈಸಿದ್ರು

ವಿನೂತನ ಮಾದರಿಯ ಪಂದ್ಯಾವಳಿ:
9 ಡ್ರೀಮ್ಸ್‌ ಸಂಸ್ಥೆ ಆಯೋಜಿಸಿದ್ದ ಸಿಎಂ ಕಪ್‌ 2026 ಟೂರ್ನಿ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ವಿಭಿನ್ನ ಮಾದರಿಯದ್ದಾಗಿತ್ತು. ಜನಪ್ರತಿನಿಧಿಗಳು, ಐಎಎಸ್‌/ಐಪಿಎಸ್‌, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಚಲನಚಿತ್ರ ರಂಗ ಹಾಗೂ ಮಾಧ್ಯಮ ಕ್ಷೇತ್ರದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಸಚಿವರಾದ ಡಾ. ಎಂ.ಸಿ. ಸುಧಾಕರ್‌, ಮಾಜಿ ಎಂಎಲ್ಸಿ ನಾರಾಯಣಸ್ವಾಮಿ, ಐಎಎಸ್‌ ಅಧಿಕಾರಿ ಸೆಲ್ವಕುಮಾರ್‌, ಐಪಿಎಸ್‌ ಅಧಿಕಾರಿಗಳಾದ ಮಿಥುನ್‌, ರಮೇಶ್‌ ಬಾನೋಥ್‌, ಕೆಎಎಸ್‌ ಅಧಿಕಾರಿಗಳಾದ ಸತೀಶ್‌, ಯೋಗೀಶ್‌, ಹಿರಿಯ ಪೊಲೀಸ್‌ ಅಧಿಕಾರಿಗಳಾದ ಪರಮೇಶ್ವರ್‌ ಸೇರಿದಂತೆ ಹಲವರು ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದರು.

Tags: #9dreamz#atsattcakers#cmcup2026#cmcupbadminton2026#saakshatvbengalurukarnataka
ShareTweetSendShare
Join us on:

Related Posts

The only standing Bala Ganapati in the world, special information about the Idagunji area that no one has seen

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ

by admin
February 23, 2026
0

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು...

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

by Shwetha
February 23, 2026
0

ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಇದೀಗ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಶಾಸಕರನ್ನು ಉದ್ದೇಶಪೂರ್ವಕವಾಗಿ ಕಾನೂನಿನ ಕುಣಿಕೆಯಲ್ಲಿ...

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

by Shwetha
February 23, 2026
0

ಬೆಂಗಳೂರು: ರಾಜ್ಯದ ಪೋಷಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದಿಸಬೇಕು ಎಂಬ ಕನಸು ಹೊತ್ತಿರುವ ಪೋಷಕರಿಗಾಗಿ ಕರ್ನಾಟಕ ಶಾಲಾ ಶಿಕ್ಷಣ...

ಕುರ್ಚಿ ಬಿಡೋದು ಸಿದ್ದರಾಮಯ್ಯ ರಕ್ತದಲ್ಲೇ ಇಲ್ಲ: ಆಶ್ರಯ ಕೊಟ್ಟ ಪಕ್ಷವನ್ನೇ ನುಂಗುವುದು ಸಿದ್ದರಾಮಯ್ಯ ಬುದ್ಧಿ – ಎಚ್‌ಡಿಕೆ ಆಕ್ರೋಶ

ಕುರ್ಚಿ ಬಿಡೋದು ಸಿದ್ದರಾಮಯ್ಯ ರಕ್ತದಲ್ಲೇ ಇಲ್ಲ: ಆಶ್ರಯ ಕೊಟ್ಟ ಪಕ್ಷವನ್ನೇ ನುಂಗುವುದು ಸಿದ್ದರಾಮಯ್ಯ ಬುದ್ಧಿ – ಎಚ್‌ಡಿಕೆ ಆಕ್ರೋಶ

by Shwetha
February 23, 2026
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಕುರುಬ ಸಮುದಾಯದ ಹೆಸರನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರನ ಮಕ್ಕಳಿದ್ದಾರೆ? ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ಕೆ ಎನ್ ರಾಜಣ್ಣ ಅಚ್ಚರಿಯ ಬ್ಯಾಟಿಂಗ್

ಯಾವ ಪಕ್ಷದಲ್ಲಿ ಸತ್ಯಹರಿಶ್ಚಂದ್ರನ ಮಕ್ಕಳಿದ್ದಾರೆ? ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ಕೆ ಎನ್ ರಾಜಣ್ಣ ಅಚ್ಚರಿಯ ಬ್ಯಾಟಿಂಗ್

by Shwetha
February 23, 2026
0

ಬೆಂಗಳೂರು: ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಬಿಜೆಪಿ ಶಾಸಕನ ಬಂಧನ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಭ್ರಷ್ಟಾಚಾರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram