30ಕ್ಕೂ ಹೆಚ್ಚು ಕಾಡಾನೆಗಳ ದಾಳಿ | ಅಪಾರ ಪ್ರಮಾಣದ ಬೆಳೆ ನಾಶ Saaksha Tv
ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಗ್ರಾಮಗಳ ತೋಟಕ್ಕೆ 30 ಕ್ಕೂ ಹೆಚ್ಚು ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಪದೇ ಪದೇ ಕಾಡಾನೆಗಳು ದಾಳಿ ನಡೆಸುತ್ತಿದ್ದು, ರೈತರು ಮತ್ತು ಗ್ರಾಮಸ್ಥರು ರೋಸಿ ಹೋಗಿದ್ದಾರೆ.
ಕಾಫಿ ತೋಟವೊಂದರಲ್ಲಿ ಬೀಡುಬಿಟ್ಟಿರುವ ಆನೆಗಳು, ಅಕ್ಕ ಪಕ್ಕದ ತೋಟಗಳಿಗೆ ನುಗ್ಗಿ ದಾಂಧಲೆ ನಡಡೆಸುತ್ತಿವೆ. ಇದರಿಂದ ಅಪಾರ ಪ್ರಮಾಣದ ಕಾಫಿ, ಭತ್ತ, ಮೆಣಸು ಸೇರಿದಂತೆ ಇನ್ನೂ ಅನೇಕ ಬೆಳೆಗಳು ನಾಶವಾಗಿವೆ. ಈ ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ.
ಎರಡು ಗಂಡಾನೆಗಳು ರಸ್ತೆ ದಾಟಿ ಕಾಫಿ ತೋಟದೊಳಗೆ ಹೋಗುವ ವಿಡೀಯೊ ವೈರಲ್ ಆಗಿದ್ದು. ಮಲೆನಾಡು ಭಾಗದ ಜನರು ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ರಸ್ತೆ ದಾಟುತ್ತಿದ್ದ ಎರಡು ಸಲಗಗಳನ್ನು ಕಂಡು ಜನರು ರಸ್ತೆಯಲ್ಲಿಯೇ ನಿಂತಿದ್ದಾರೆ.