ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರ ಆರೋಗ್ಯ ತಪಾಸಣೆ ನಡೆಸಲು ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಹೋಗಿದ್ದರು. ಈ ವೇಳೆ ಸಾಧಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿತ್ತು. ಹಾಗಾಗಿ ಸಾರಾಯಿ ಪಾಳ್ಯದ 50-60 ಜನರ ಮೇಲೆ ಪ್ರಕರಣ ದಾಖಲು ಆಗಿದೆ. ಇದರ ಬೆನ್ನಲ್ಲೇ ಸುಹೇಲ್ ಭಾಷಾ, ಮೊಹಮ್ಮದ್ ಮುಸ್ತಾಫ್, ಸಗೀರ್ ಶರೀಫ್, ಸರ್ಫರಾಜ್ ಹಡ್ಪಾ ಮತ್ತು ಅನ್ಸರ್ ಜಬ್ಬಾರ್ ಎಂಬ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.








