Attaining spiritual wellness: ಕೆಲಸದಲ್ಲಿ ಆದ್ಯಾತ್ಮಿಕ ಆರೋಗ್ಯ ಸಾಧಿಸುವುದು ಹೀಗೆ…
ಬೆಳಿಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬರ ಜೀವನದಲ್ಲೂ ಕೆಲಸದ ಒತ್ತಡ, ಕುಟುಂಬದ ಜವಬ್ದಾರಿ ಸೇರಿದಂತೆ ಹಲವು ಕಿರಿಕಿರಿಗಳು ಕಾಡುತ್ತಲೇ ಇರುತ್ತವೆ. ಈ ಒತ್ತಡ ಕಿರಿಕಿಯಿಂದ ದೂರ ಬರಲು ಹಲವರು ಕುಡಿತ ಮತ್ತು ಸಿಗರೇಟ್ ನಂತಹ ದುಷ್ಟಚಟಗಳ ದಾಸರಾಗುತ್ತಾರೆ. ಆದರೆ ಇದು ಇನ್ನೊಂದು ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ..
ಈ ರೀತಿಯ ಒತ್ತಡ ಮತ್ತು ಕಿರಿಯಿಂದ ಹೊರಬರಲು ಉತ್ತಮ ಮಾರ್ಗವೆಂದರೆ ಮನಸ್ಸು ಮತ್ತು ಮೆದುಳನ್ನ ಶಾಂತಗೊಳಿಸಿವುದು. ಪ್ರತಿದಿನ ಆಧ್ಯಾತ್ಮಿಕತೆಯನ್ನ ಅಭ್ಯಾಸ ಮಾಡುವ ಮೂಲಕ ಶಾಂತಿಯುತವಾಗಿ ಬದುಕುವ ಸಾಮರ್ಥ್ಯವನ್ನ ಗಳಿಸುವ ಅಗತ್ಯವಿದೆ. ಅಸ್ತವ್ಯಸ್ತಗೊಂಡಿರುವ ಜೀವನದಿಂದ ಸ್ಪಷ್ಟತೆಗೆ, ಅಜ್ಞಾನದಿಂದ ಜ್ಞಾನೋದಯದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಚಲಿಸುವಾಗ, ಕೆಲಸದ ಸ್ಥಳದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡುತ್ತದೆ.
ಆಧ್ಯಾತ್ಮಿಕ ಆರೋಗ್ಯ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಿಂತ ಹೆಚ್ಚು. ಇದು ವ್ಯಾಯಾಮ ಮತ್ತು ಸಾಧನೆಗಿಂತ ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದರೆ ಆಫಿಸ್ ವಾತಾವರಣದಲ್ಲಿ ಆಧ್ಯಾತ್ಮಿಕತೆ ತರಲು ಇದನ್ನ ಅಳವಡಿಸಿಕೊಳ್ಳುವುದು ಅವಶ್ಯಕ.
- ಕಛೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸ್ನೇಹದಿಂದಿರಿ.
2. ಸಾಧ್ಯವಾದಷ್ಟು ಶಾಂತವಾಗಿರಲು ಅವರನ್ನು ಪ್ರೋತ್ಸಾಹಿಸಿ.
3. ನಿಮ್ಮ ಭಾವನೆಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
4. ಯೋಗವನ್ನು ಅಭ್ಯಾಸ ಮಾಡಲು ಜನರನ್ನು ಪ್ರೋತ್ಸಾಹಿಸಿ. ಇದು ಶಿಸ್ತನ್ನು ಹೆಚ್ಚಿಸುತ್ತದೆ.
5. ಪ್ರತಿ ವಾರ ಪ್ರಾರ್ಥನೆ, ಸತ್ಸಂಗಗಳನ್ನ ಆಯೋಜಿಸಿ.








