ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ (Kalaburagi Central Jail) ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾದ ಅಧೀಕ್ಷಕಿ ಅನಿತಾ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಸರಣಿ ಮುಂದುವರೆದಿದೆ.
ಜೈಲು ಅಧೀಕ್ಷಕಿ ಅನಿತಾ ಭೇಟಿ ಸಂದರ್ಭದಲ್ಲಿ ಕೈದಿಯೊಬ್ಬ ಕದ್ದುಮುಚ್ಚಿ ಮೊಬೈಲ್ ಬಳಕೆ ಮಾಡುವ ದೃಶ್ಯ ಸೆರೆಯಾಗಿದೆ. ಈಗ ಅದು ವೈರಲ್ ಆಗಿದೆ. ಇತ್ತೀಚೆಗಷ್ಟೇ ಜೈಲಿನಲ್ಲೇ ಎಣ್ಣೆ ಹೊಡೆಯುತ್ತಿದ್ದ ವಿಡಿಯೋಗಳು ವೈರಲ್ ಆಗಿದ್ದವು.
ಬೆಳಗಾವಿಯಲ್ಲಿನ ಕರ್ಮಕಾಂಡಗಳು ಕೂಡ ಇತ್ತೀಚೆಗೆ ಹೊರ ಬಿದ್ದಿದ್ದವು. ಹಿಂಡಲಗಾ ಜೈಲಲ್ಲಿ ದುಡ್ಡು ಕೊಟ್ರೆ ಎಲ್ಲಾ ವ್ಯವಸ್ಥೆಗಳನ್ನು ಅಧೀಕ್ಷಕ ಕೃಷ್ಣಮೂರ್ತಿ ಮಾಡ್ತಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.