
ಚಿಕ್ಕಮಗಳೂರು : ಒಂದೇ ಕುಟುಂಬದ ಮೂವರು ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಸಿಗದಾಳು ಘಾಟಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಉತ್ತಮೇಶ್ವರದ ಬಾಬಣ್ಣ(55 ), ಶೈಲಾ(32) ಹಾಗೂ ಅನನ್ಯ(11) ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಕೀಟನಾಶಕ ಔಷಧಿಯನ್ನು ಸೇವಿಸಿ ನರಳಾಡುತ್ತಿದ್ದ ಇವರನ್ನು ಕಂಡ ಸ್ಥಳೀಯರು ಹರಿಹರಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಮೂವರನ್ನೂ ಕೊಪ್ಪ ಸಾರ್ವಜನಿಕ ಆಸ್ವತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಮಣಿಪಾಲ್ ಆಸ್ವತ್ರೆಗೆ ರವಾನಿಸಲಾಗಿದೆ.
ಇನ್ನು ಆತ್ಮಹತ್ಯೆಗೆ ಯತ್ನಿಸಿರುವ ಬಾಬಣ್ಣ ಕೊಪ್ಪದ ಹುಲ್ಲುಮಕ್ಕಿಯಲ್ಲಿ ವಾಸವಿದ್ದರು. ಆ ಮನೆಯನ್ನು ಮಾರಾಟ ಮಾಡಿ ಉತ್ತಮೇಶ್ವರ ಗ್ರಾಮದಲ್ಲಿ ಜಮೀನು ಖರೀದಿಸಿ ವಾಸವಿದ್ದರು ಎಂದು ತಿಳಿದುಬಂದಿದೆ.








