ಮೈಸೂರು: ಬೆಂಗಳೂರಿನಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಮೈಸೂರಿನ ಜಮೀನೊಂದರಲ್ಲಿ ರಾತ್ರೋರಾತ್ರಿ ಅಂತ್ಯಸಂಸ್ಕಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಶವಸಂಸ್ಕಾರಕ್ಕೆ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಆಂಬ್ಯುಲೆನ್ಸ್ ಮೂಲಕ ಗ್ರಾಮಕ್ಕೆ ರಾತ್ರೋರಾತ್ರಿ ಅಂತ್ಯಕ್ರಿಯೆಗಾಗಿ ಜಮೀನಿಗೆ ಬಂದ ಮೃತದೇಹ ಬಂದಿದ್ದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೊರೊನಾದಿಂದ ಮೃತಪಟ್ಟ ಶವವನ್ನು ಬೆಂಗಳೂರಿನಿಂದ ತಂದು ಅಂತ್ಯಕ್ರಿಯೆ ಮಾಡಲು
ಪಟ್ಟಣವಾಸಿಗಳು ಮುಂದಾಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಂಚಿಪುರ ಮತ್ತು ಹೊಸವೀಡು ಗ್ರಾಮದ ಮಧ್ಯಭಾಗದಲ್ಲಿ. ಇತ್ತೀಚೆಗೆ ನಿಧನರಾದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸಂಬಂಧಿಗೆ ಸೇರಿದ ಜಮೀನಿನಲ್ಲಿ ಶವಸಂಸ್ಕಾರಕ್ಕೆ ಪಟ್ಟಣವಾಸಿಗಳು ಮುಂದಾಗಿದ್ದರು ಎಂಬುದು ಹೊಸವೀಡು ಗ್ರಾಮಸ್ಥರ ಆರೋಪವಾಗಿದೆ.
ಪಟ್ಟಣದಿಂದ ಆಗಮಿಸಿದ ಮೃತದೇಹ ಶವಸಂಸ್ಕಾರಕ್ಕೆ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೆÇಲೀಸರು ಮತ್ತು ಗ್ರಾಮದ ಜನರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶವಸಂಸ್ಕಾರಕ್ಕೆ ತಂದಿದ್ದ ಜೆಸಿಬಿ ಯಂತ್ರವನ್ನು ಗ್ರಾಮಸ್ಥರು ಜಖಂ ಮಾಡಿದ್ದಾರೆ.
ಗ್ರಾಮಸ್ಥರ ವಿರೋಧಕ್ಕೆ ಬೆದರಿದ ನಗರವಾಸಿಗಳು ಮೃತದೇಹ ವಾಪಸ್ ಕೊಂಡೊಯ್ದಿದ್ದಾರೆ. ಘಟನೆ ಸಂಬಂಧ 15 ಜನರನ್ನು ನಂಜನಗೂಡು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಹೊಸವೀಡು ಗ್ರಾಮದ ಆರು ಜನ ಹುಲ್ಲಹಳ್ಳಿ ಪೆÇಲೀಸ್ ವಶಕ್ಕೆ ಪಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೊಸವೀಡು ಗ್ರಾಮದಲ್ಲಿ ಭದ್ರತೆಗೆ ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ.
ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ಕೊಲೆ
ಬಾಗಲಕೋಟೆ: ಅಕ್ರಮ ಮದ್ಯ ಮಾರಾಟ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ನಡೆದಿದೆ. ಐವರು ವ್ಯಕ್ತಿಗಳು ಸೇರಿಕೊಂಡು ಓರ್ವ ವ್ಯಕ್ತಿಯನ್ನು ಕೊಲೆ ಮಾಡಿದ್ದರೆ. ಈ ಘಟನೆ ಜಿಲ್ಲೆಯ...