ಆಗಸ್ಟ್ 15 ಭಾರತದ ಸ್ವತಂತ್ರ್ಯ ದಿನಾಚರಣೆ ಬಂತೆಂದ್ರೆ ಸಾಕು ಮೊದಲಿಗೆ ನೆನಪಾಗೋದೆ ಮಕ್ಕಳು. ಮುಂಜಾನೆ ಬೇಗನೆ ಎದ್ದು, ಕೈಗೆ ಬ್ಯಾಂಡ್ ತೊಟ್ಟು, ಬ್ಯಾಡ್ಜ್ ಹಾಕಿಕೊಂಡು ಕೈಯಲ್ಲಿ ಭಾರತದ ಧ್ವಜ ಹಿಡಿದು ಎಲ್ಲರೂ ಶಾಲೆಗಳಿಗೆ ತೆರಳುತ್ತಾರೆ. ಆಗ ಪುಟ್ಟ ಮಕ್ಕಳನ್ನು ನೋಡುವುದೇ ಒಂದು ಸಂಭ್ರಮ. ಆದರೆ ಈ ಬಾರಿ ದೇಶದಲ್ಲಿ ಕೊರೊನಾ ಹಾವಳಿಯಿಂದಾಗಿ ಶಾಲೆಗಳೆಲ್ಲ ಬಂದ್ ಆಗಿದ್ದು, ಸ್ವಾತಂತ್ರ್ಯ ದಿನಾಚರಣೆಯನ್ನು ಮಕ್ಕಳಿಲ್ಲದೆ ಸರಳವಾಗಿ ಆಚರಣೆ ಮಾಡಲಾಗಿದೆ.
ರೆಡ್ ಫೋರ್ಟ್ ನಲ್ಲಿ ಧ್ವಜಾರೋಹಣ ನೆರವೇರಿಸಿ ಈ ಬಗ್ಗೆ ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ ಅವರು ಇಂದು ನಾವು ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ಇಲ್ಲಿ ಇಂದು ಮಕ್ಕಳನ್ನು ಕಾಣದಿರುವುದು ನನಗೂ ಸಹ ನೋವುಂಟುಮಾಡಿದೆ. ಇಡೀ ದೇಶದ ಪರವಾಗಿ ನಾನು ಈ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಹೇಳಲು ಬಯಸುತ್ತೇನೆ. ಎಂದಿದ್ದಾರೆ.








