ಸಿಇಟಿಗೆ ಮುಹೂರ್ತ ಫಿಕ್ಸ್.. ಆಗಸ್ಟ್ 28, 29 ಎಕ್ಸಾಂ
ಬೆಂಗಳೂರು : ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 28, 29ರಂದು ಪರೀಕ್ಷೆ ನಡೆಯಲಿದೆ.
ಈ ಕುರಿತಂತೆ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ವೃತ್ತಿ ಪರ ಕೋರ್ಸ್ ಗಳಿಗೆ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸದಂತೆ ಮನವಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗುವುದಾಗಿ ತಿಳಿಸಿದರು.

ಅಲ್ಲದೇ ವೃತ್ತಿಪರ ಕೋರ್ಸ್ ಗಳಿಗೆ ನಡೆಸುವ ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28, 29ರಂದು ನಡೆಸಲಾಗುತ್ತದೆ.
ಇದರ ನೊಂದಣಿ ಕಾರ್ಯ ಜೂನ್.15ರಿಂದ ಆರಂಭವಾಗಲಿದೆ. ಮೊದಲ ದಿನ ಗಣಿತ, ಜೀವಶಾಸ್ತ್ರ ಪರೀಕ್ಷೆ ನಡೆಸಲಾಗುತ್ತದೆ.
2 ನೇ ದಿನ ರಾಸಾಯನ ಶಾಸ್ತ್ರ ಭೌತ ಶಾಸ್ತ್ರ ಪರೀಕ್ಷೆ ನಡೆಯಲಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಂಕ ಪರಿಗಣನೆ ಮಾಡಲಾಗುತ್ತದೆ ಎಂದು ಡಿಸಿಎಂ ತಿಳಿಸಿದ್ದಾರೆ.








