AUS vs SA 1st Test : ಆಸಿಸ್ ಮಾರಕ ದಾಳಿಗೆ ಕುಸಿದ ಸೌತ್ ಆಫ್ರಿಕಾ..!!
ಬೌಲರ್ ಗಳ ಸಂಘಟಿತ ಪ್ರದರ್ಶನ ಹಾಗೂ ಟ್ರಾವಿಸ್ ಹೆಡ್(78*) ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಸೌತ್ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅತಿಥೇಯ ಆಸ್ಟ್ರೇಲಿಯಾ ಮೊದಲ ದಿನದ ಗೌರವ ಪಡೆದಿದೆ.
ಬ್ರಿಸ್ಬೆನ್‌ನಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಸೌತ್ ಆಫ್ರಿಕಾ, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು.
ನಂತರ ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗಳನ್ನ ಕಳೆದುಕೊಂಡು 145 ರನ್‌ಗಳಿಸಿದ್ದು, 7 ರನ್‌ಗಳ ಹಿನ್ನಡೆಯೊಂದಿಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಆಸೀಸ್ ಮಾರಕ ಬೌಲಿಂಗ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸೌತ್ ಆಫ್ರಿಕಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಿದ ನಾಯಕ ಡೀನ್ ಎಲ್ಗರ್(3) ಹಾಗೂ ಸರೆಲ್ ಎರ್ವೆ(10) ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ. ನಂತರ ಬಂದ ವ್ಯಾನ್ ದರ್ ದುಸೇನ್(5) ಸಹ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಇವರ ಬೆನ್ನಲ್ಲೇ ಜೊಂಡೋ(0) ಸಹ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಪರಿಣಾಮ ಸೌತ್ ಆಫ್ರಿಕಾ 27 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಬವುಮಾ-ವೆರ್ರೆನ್ನೆ ಚೇತರಿಕೆ:
ಈ ಹಂತದಲ್ಲಿ ಜೊತೆಯಾದ ತೆಂಬಾ ಬವುಮಾ(38) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೈಲ್ ವರ್ರೆನ್ನೆ(64) ರನ್‌ಗಳಿಸಿದರು. 5ನೇ ವಿಕೆಟ್‌ಗೆ ಈ ಇಬ್ಬರು 98 ರನ್‌ಗಳ ಜೊತೆಯಾಟದ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಇವರಿಬ್ಬರು ಔಟಾದ ನಂತರದಲ್ಲಿ ಕಣಕ್ಕಿಳಿದ ಯಾವುದೇ ಆಟಗಾರರು ನಿರೀಕ್ಷಿತ ಆಟವಾಡದ ಪರಿಣಾಮ ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಹಾಗೂ ನೇಥನ್ ಲಿಯಾನ್ ತಲಾ 3 ವಿಕೆಟ್ ಪಡೆದರೆ. ಕಮ್ಮಿನ್ಸ್ ಮತ್ತು ಬೊಲ್ಯಾಂಡ್ ತಲಾ 2 ವಿಕೆಟ್ ಪಡೆದರು.
ಆಸೀಸ್‌ಗೆ ಹೆಡ್ ಆಸರೆ:
ಅತಿಥೇಯ ಆಸ್ಟ್ರೇಲಿಯಾ ಸಹ ತನ್ನ ಮೊದಲ ಇನ್ನಿಂಗ್ಸ್ ಉತ್ತಮವನ್ನ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಡೇವಿಡ್ ವಾರ್ನರ್(0) ಮೊದಲ ಬಾಲ್‌ನಲ್ಲೇ ಔಟಾದರೆ. ಉಸ್ಮಾನ್ ಖವಾಜ(11) ಹಾಗೂ ಮಾರ್ನಸ್ ಲಬುಸ್ಚೆಗ್ನೆ(11) ನಿರೀಕ್ಷಿತ ಆಟವಾಡಲಿಲ್ಲ. ಹೀಗಾಗಿ ಆಸೀಸ್ ಸಹ 27ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಸ್ಟೀವ್ ಸ್ಮಿತ್(36) ಉಪಯುಕ್ತ ರನ್‌ಗಳಿಸಿ ಹೊರನಡೆದರೆ. ಇವರ ಬೆನ್ನಲ್ಲೇ ಬಂದ ಸ್ಕಾಟ್ ಬೊಲ್ಯಾಂಡ್(1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಜವಾಬ್ದಾರಿಯ ಟ್ರಾವಿಸ್ ಹೆಡ್(78*) ಜವಾಬ್ದಾರಿಯ ಆಟದಿಂದ ತಂಡಕ್ಕೆ ಆಸರೆಯಾಗಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸೌತ್ ಆಫ್ರಿಕಾ ಪರ ರಬಾಡ ಮತ್ತು ನೋಕಿಯೇ 2 ವಿಕೆಟ್ ಪಡೆದರೆ. ಮಾರ್ಕೋ ಜಾನ್ಸನ್ 1 ವಿಕೆಟ್ ಪಡೆದರು.








