ಬ್ರೇಟ್ ಲೀ… ಆಸ್ಟ್ರೇಲಿಯಾದ ಮಾಜಿ ವೇಗಿ. ಮೈದಾನದಲ್ಲಿ ಬೆಂಕಿಯಂತಹ ಚೆಂಡುಗಳನ್ನು ಎಸೆದ್ರೂ ಮನಸ್ಸು ಅಷ್ಟೇ ಮೃದುವಾಗಿರುತ್ತದೆ. ತಾನೊಬ್ಬ ಅದ್ಭುತ ವೇಗಿಯಾಗಿ ರೂಪುಗೊಂಡ್ರೂ ಎದುರಾಳಿ ಬ್ಯಾಟ್ಸ್ ಮೆನ್ಗಳ ಸಾಮಥ್ರ್ಯಕ್ಕೆ ತಕ್ಕಂತೆ ಮರ್ಯಾದೆ ಕೂಡ ಕೊಡುತ್ತಿದ್ದರು. ಬ್ರೇಟ್ ಲೀ ಕೇವಲ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಹಾಡುಗಾರ, ಸಂಗೀತಗಾರನೂ ಹೌದು. ಹೀಗಾಗಿ ಬ್ರೇಟ್ ಲೀ 22 ಯಾರ್ಡ್ ಪಿಚ್ನಲ್ಲಿ ಲಯಬದ್ಧವಾಗಿ ಬೌಲಿಂಗ್ ಮಾಡುತ್ತಿದ್ದರು. ಕೆಲವೊಂದು ಬಾರಿ ಲಯ ತಪ್ಪಿದ್ದೂ ಉಂಟು.
ಅದೇನೇ ಇರಲಿ, ಬ್ರೇಟ್ ಲೀ ಹೆಸರಿನಲ್ಲಿ ಎರಡು ವಿಶ್ವಕಪ್ ಗೆದ್ದ ಹಿರಿಮೆ ಇದೆ. 2003 ಮತ್ತು 2007ರ ವಿಶ್ವಕಪ್ ತಂಡದಲ್ಲಿದ್ದ ಬ್ರೇಟ್ ಲೀ ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದು 1999ರಲ್ಲಿ. ಅದು, ಕೂಡ ಭಾರತದ ವಿರುದ್ಧವೇ. ಅದೇ ರೀತಿ ಬ್ರೇಟ್ ಲೀ ಗೂ ಭಾರತಕ್ಕೂ ಒಂಥಾರ ನಂಟಿದೆ. ಐಪಿಎಲ್ ನಲ್ಲೂ ಆಡುತ್ತಿದ್ದ ಬ್ರೇಟ್ ಲೀಯ ಬೌಲಿಂಗ್ ಶೈಲಿಗೆ ಭಾರತೀಯ ಅಭಿಮಾನಿಗಳು ಫಿದಾ ಆಗಿದ್ರು.
ವೇಗದ ಬೌಲಿಂಗ್ ನಲ್ಲಿ ಮಿಂಚು ಹರಿಸಿದ್ದ ಬ್ರೇಟ್ ಲೀ ವಿದಾಯಕ್ಕೂ ಮುನ್ನ ವಿಶ್ವದ ಅಪ್ರತಿಮ ಬ್ಯಾಟ್ಸ್ ಮೆನ್ಗಳ ಎದುರು ಆಡಿದ್ದರು. ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಜಾಕ್ ಕಾಲಿಸ್, ರಾಹುಲ್ ದ್ರಾವಿಡ್, ಸೆಹ್ವಾಗ್, ಕೇವಿನ್ ಪೀಟರ್ಸನ್, ಕುಮಾರ ಸಂಗಕ್ಕರ, ಮಹೇಲಾ ಜಯವರ್ಧನೆ, ಇಂಜಾಮಮ್ ಉಲ್ ಹಕ್ ಹೀಗೆ ಶ್ರೇಷ್ಠ ಬ್ಯಾಟ್ಸ್ ಮೆನ್ಗಳಿಗೆ ತನ್ನ ಬೌಲಿಂಗ್ ಸಾಮಥ್ರ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದರು.
ಅಂತಹ ಬ್ರೇಟ್ ಲೀ ಈಗ ವಿಶ್ವ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ ಮೆನ್ಗಳನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೆ ಏನಕ್ಕೆ ಆಯ್ಕೆ ಮಾಡಿದ್ದೆ ಎಂಬುದನ್ನು ಹೇಳಿದ್ದಾರೆ. ಅಂದ ಹಾಗೇ ಬ್ರೇಟ್ ಲೀ ಹೆಸರಿಸಿದ ಆ ಮೂರು ಬ್ಯಾಟ್ಸ್ ಮೆನ್ಗಳ ಪೈಕಿ ಮೊದಲನೇಯವರು ಭಾರತದ ಸಚಿನ್ ತೆಂಡುಲ್ಕರ್. ಎರಡನೇಯವರು ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ. ಮೂರನೇಯವರು ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್.
ಸಚಿನ್ ತೆಂಡುಲ್ಕರ್ ಯಾಕೆ : ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಹಾಗೂ ಗರಿಷ್ಠ ಶತಕ ದಾಖಲಿಸಿದ್ದ ದಾಖಲೆಗಳು ಇನ್ನೂ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿವೆ. ಹಾಗೇ ನೂರು ಶತಕ ಹಾಗೂ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ ಅವರ ರನ್ ವೇಗಕ್ಕೂ ಬ್ರೇಟ್ ಲೀ ಕಡಿವಾಣ ಹಾಕಿದ್ದಾರೆ. ಹಾಗೇ ಸಚಿನ್ ಕೂಡ ಬ್ರೇಟ್ ಲೀಗೆ ತಾನು ಎಂಥ ಬ್ಯಾಟ್ಸ್ ಮೆನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಹುಶಃ ಹೀಗಾಗಿಯೇ ಬ್ರೇಟ್ ಲೀಯವರ ಶ್ರೇಷ್ಠ ಬ್ಯಾಟ್ಸ್ ಮೆನ್ ಪಟ್ಟಿಯಲ್ಲಿ ಸಚಿನ್ ಮೊದಲಿಗರಾಗಿ ಕಾಣುತ್ತಾರೆ.
ಬ್ರಿಯಾನ್ ಲಾರಾ ಯಾಕೆ ? ಬ್ರಿಯಾನ್ ಲಾರಾ ವೆಸ್ಟ್ ಇಂಡೀಸ್ ಕ್ರಿಕೆಟ್ನ ದಂತಕಥೆ. ಅಬ್ಬರದ ಬ್ಯಾಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲ, ನೀವು ಆರು ಎಸೆತಗಳನ್ನು ಒಂದೇ ಜಾಗಕ್ಕೆ ಹಾಕಿದ್ರೂ ಅದನ್ನು ಬ್ರಿಯಾನ್ ಲಾರಾ ಆರು ಬೇರೆ ಬೇರೆ ಕಡೆ ಹೊಡಿಯುತ್ತಾರೆ. ಅಂತಹ ಸಾಮಥ್ರ್ಯ ಅವರಲ್ಲಿದೆ. ಬ್ರಿಯಾನ್ ಲಾರಾ ಅವರು 131 ಟೆಸ್ಟ್ ಪಂದ್ಯಗಳಲ್ಲಿ 11053 ರನ್ ಹಾಗೂ 299 ಏಕದಿನ ಪಂದ್ಯಗಳಲ್ಲಿ 10405 ರನ್ ಸಿಡಿಸಿದ್ದಾರೆ.
ಜಾಕ್ ಕಾಲೀಸ್ ಯಾಕೆ ?- ದಕ್ಷಿಣ ಆಫ್ರಿಕಾದ ಅದ್ಭುತ ಆಲ್ರೌಂಡರ್. ಜಾಕ್ ಕಾಲಿಸ್ ಅವರು ಶ್ರೇಷ್ಠ ಕ್ರಿಕೆಟಿಗ. ನಾನು ಸಚಿನ್ ಅವರನ್ನು ಶ್ರೇಷ್ಠ ಬ್ಯಾಟ್ಸ್ ಮೆನ್ ಅಂತ ಪರಿಗಣಿಸಿದ್ದೇನೆ. ನಾನು ಗ್ಯಾರಿಸ್ ಸೋಬರ್ಸ್ ಅವರ ಆಟವನ್ನು ಕಣ್ಣಾರೆ ನೋಡಿಲ್ಲ. ವಿಡಿಯೋಗಳಲ್ಲಿ ನೋಡಿದ್ದೇನೆ. ಆದ್ರೆ ಒಬ್ಬ ಆಟಗಾರನಾಗಿ ಅವರ ವಿರುದ್ಧವಾಗಿ ಆಡಿದವನಾಗಿ ಹೇಳುತ್ತೇನೆ. ನನ್ನ ಪ್ರಕಾರ ಜಾಕ್ ಕಾಲೀಸ್ ಬೆಸ್ಟ್ ಕ್ರಿಕೆಟಿಗ. ಕಾಲೀಸ್ ಒಬ್ಬ ಪರಿಪೂರ್ಣ ಕ್ರಿಕೆಟಿಗ. ಬೌಲಿಂಗ್ ಮಾಡುತ್ತಾರೆ. ಬ್ಯಾಟಿಂಗ್ ಮಾಡುತ್ತಾರೆ. ಸ್ಲಿಪ್ನಲ್ಲಿ ಕ್ಯಾಚ್ ಹಿಡಿಯುತ್ತಾರೆ ಅಂತ ಬ್ರೇಟ್ ಲೀ ಹೇಳುತ್ತಾರೆ.








