ಆಸೀಸ್ ಟೆಸ್ಟ್ ಸರಣಿ : ಫಸ್ಟ್ ಇನ್ನಿಂಗ್ಸ್ ನಲ್ಲಿ ಭಾರತ 244ಕ್ಕೆ ಆಲೌಟ್
ಅಡಿಲೇಡ್ : ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಫಸ್ಟ್ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 244ಕ್ಕೆ ಆಲೌಟ್ ಆಗಿದೆ.
ಭಾರತದ ಪರ ಪೂಜಾರ, ನಾಯಕ ವಿರಾಟ್ ಕೊಹ್ಲಿ, ರಹಾನೆ ಬಿಟ್ಟರೇ ಇನ್ನುಳಿದ ಯಾವ ಆಟಗಾರನೂ ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕರಾದ ಪೃಥ್ವಿ ಶಾ, ಮಯಾಂಕ್ ಅಗರ್ ವಾಲ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದ್ರು. ಮೊದಲ ಓವರ್ ನಲ್ಲೇ ಪೃಥ್ವಿ ಶಾ ಮಿಚೆಲ್ ವೇಗಕ್ಕೆ ಕಂಗಾಲಾಗಿ ಕ್ಲೀನ್ ಬೋಲ್ಡ್ ಆದ್ರು.
ನಂತರ ತುಸು ಎಚ್ಚರಿಕೆಯ ಆಟಕ್ಕೆ ಮುಂದಾದ ಮಯಾಂಕ್ 17 ರನ್ ಗಳಿಸಿದ್ದ ವೇಳೆ ಕಮ್ಮಿನ್ಸ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು.
ನಾಯಕ ವಿರಾಟ್ ನಂಬಿಕೆಯನ್ನು ಹುಸಿಗೊಳಿಸಿದ ಪೃಥ್ವಿ ಶಾ..!
ಈ ಸಂಕಷ್ಟ ಸಂದರ್ಭದಲ್ಲಿ ಕ್ರೀಸ್ ಗೆ ಬಂದ ನಾಯಕ ವಿರಾಟ್ ಕೊಹ್ಲಿ, ಪೂಜಾರ ಜೊತೆ ಸೇರಿ ರಕ್ಷಣಾತ್ಮಕ ಆಟದ ಜೊತೆ ಜೊತೆಗೆ ರನ್ ವೇಗವನ್ನು ಹೆಚ್ಚಿದ್ರು. ಹಾಗೇ ಅರ್ಧ ಶತಕ ದಾಖಲಿಸಿ ಮಿಂಚಿದ್ರು.
ಇತ್ತ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಪುಜಾರಾ 43 ರನ್ ಗಳಿಸಿದ್ದ ವೇಳೆ ಲಿಯಾನ್ ಗೆ ವಿಕೆಟ್ ನೀಡಿದ್ರು. ಬಳಿಕ ರಹಾನೆ- ವಿರಾಟ್ ಜೊತೆ ಗೂಡಿ ಆಸೀಸ್ ಬೌಲರ್ ಗಳ ಬೆವರಿಳಿಸಿದ್ರು. ಮಧ್ಯೆ ಇಲ್ಲದ ರನ್ ಕದಿಯಲು ಹೋಗಿ 74 ರನ್ ಗಳಿಸಿದ್ದ ವಿರಾಟ್ ರನ್ ಔಟ್ ಆದ್ರು.
ಇದಾದ ಬಳಿಕ ಟೀಂ ಇಂಡಿಯಾದ ಪೆವಿಲೀಯನ್ ಪರೇಡ್ ಶುರುವಾಯ್ತು. ಹನುಮ ವಿಹಾರಿ 16 ರನ್, ವೃದ್ಧಿಮಾನ್ ಸಹ 9. ರಹಾನೆ 42, ಅಶ್ವೀನ್ 15, ಉಮೇಶ್ ಯಾದವ್ 6, ಬೂಮ್ರಾ 4 ರನ್ ಗಳಿಸಿದ್ರು. ಅಂತಿಮ ವಾಗಿ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 244ಕ್ಕೆ ಆಲೌಟ್ ಆಯ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel