Australia Cricket : ಮಹಿಳೆಯರ ಮೇಲಿನ ತಾಲಿಬಾನಿಗಳ ದಬ್ಬಾಳಿಕೆ ಖಂಡಿಸಿ , ಅಫ್ಗಾನ್ ವಿರುದ್ಧ ಪಂದ್ಯ ರದ್ದುಗೊಳಿಸಿದ ಆಸ್ಟ್ರೇಲಿಯಾ..!
ಮಹಿಳೆಯರಿಗೆ ಮತ್ತು ಬಾಲಕಿಯರ ಶಿಕ್ಷಣಕ್ಕೆ ತಾಲಿಬಾನ್ ಆಡಳಿತ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ರದ್ದು ಮಾಡಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಅಫ್ಘಾನ್ ವಿರುದ್ಧ ಮಾರ್ಚ್ ನಲ್ಲಿ 3 ಪಂದ್ಯಗಳ ಏಕದಿನ ಸರಣಿ ಯುಎಇಯಲ್ಲಿ ಆಡಬೇಕಿತ್ತು.
ಅಫ್ಘಾನಿಸ್ತಾನ ಸೇರಿ ಜಗತ್ತಿನ ಎಲ್ಲಾ ಪುರಷ ಮತ್ತು ಮಹಿಳೆಯರ ಕ್ರಿಕೆಟ್ ಬೆಳವಣಿಗೆಯನ್ನು ನಾವು ಬೆಂಬಲಿಸುತ್ತೇವೆ. ಆಫ್ಘಾನ್ನಲ್ಲಿ ಮಹಿಳೆಯರ ಪರಿಸ್ಥಿತಿ ಸುಧಾರಿಸಿದ ನಂತರ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಜೊತೆ ಟೂರ್ನಿ ಆಯೋಜಿಸುತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಇತ್ತೀಚೆಗೆ ತಾಲಿಬಾನ್ ಆಡಳಿತ ಉದ್ಯೋಗ ಮತ್ತು ಶಿಕ್ಷಣದ ಮೇಲೆ ನಿರ್ಬಂಧ ಹೇರಿದ್ದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ ನೀಡಿದೆ.
ಈ ವಿಚಾರದಲ್ಲಿ ಆಸ್ಟ್ರೇಲಿಯಾ ಸರ್ಕಾರ ನಮ್ಮನ್ನು ಬೆಂಬಲಿಸಿದಕ್ಕೆ ಧನ್ಯವಾದವನ್ನು ಹೇಳುತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
Australia Cricket cancles match Against Afganistan








