2ನೇ ಏಕದಿನ ಪಂದ್ಯ ಸೋತ ಟೀಂ ಇಂಡಿಯಾ : ಸರಣಿ ಗೆದ್ದ ಆಸೀಸ್
ಕ್ಯಾನ್ಬೆರಾ : ಸಿಡ್ನಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 51 ರನ್ ನಿಂದ ಸೋಲನುಭವಿಸಿದೆ.
ಆಸ್ಟ್ರೇಲಿಯಾದ ನೀಡಿದ 390 ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 338 ರನ್ ಗಳಿಸಲಷ್ಟೆ ಶಕ್ತವಾಯಿತು.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 389 ರನ್ ಗಳಿಸಿತು.
ಆಸೀಸ್ ಪರ ಆರಂಭಿಕರಾದ ಡೇವಿಡ್ ವಾರ್ನರ್ (83), ನಾಯಕ ಆಯರೂನ್ ಫಿಂಚ್ (60) ಅದ್ಭುತ ಆರಂಭ ನೀಡಿದರು.
ಬಳಿಕ ಕ್ರೀಸ್ ಗೆ ಬಂದ ಸ್ಟೀವ್ ಸ್ಮಿತ್ ಟೀಂ ಇಂಡಿಯಾ ಬೌಲರ್ ಗಳನ್ನು ಬೆಂಡೆತ್ತಿದ್ದರು.
ಅವರು 64 ಎಸೆತಗಳಲ್ಲಿ 104 ರನ್ ಗಳಿಸಿ ಔಟ್ ಆದರು. ಇನ್ನು ಮಾರ್ನಸ್ ಲಬುಶೇನ್ (70) ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ (60*) ಅತ್ಯುತ್ತಮ ಆಟದ ಮೂಲಕ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.
ಉಳಿದಂತೆ ಮೊಯಿಸಸ್ ಹೆನ್ರಿಕ್ಸ್ 2 ರನ್? ಗಳಿಸಿ ಅಜೇಯರಾಗಿ ಉಳಿದರು. ಸಿಡ್ನಿಯ ಕ್ರಿಕೆಟ್ ಮೈದಾನದಲ್ಲೂ ಅದಾನಿ ವಿರುದ್ಧ ಪ್ರತಿಭಟನೆ
390 ರನ್ ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕರಾದ ಮಯಾಂಕ್ – ಧವನ್ ಉತ್ತಮ ಆರಂಭ ನೀಡಿದರು. ಆದ್ರೆ 30 ರನ್ ಗಳಿಸಿದ್ದ ವೇಳೆ ಹೆಂಜನ್ ವುಡ್ ಗೆ ಧವನ್ ವಿಕೆಟ್ ಒಪ್ಪಿಸಿದರು.
ಇದಾಗ ಕೆಲವೇ ಕ್ಷಣಗಳಲ್ಲಿ ಮಯಾಂಕ್ 28 ರನ್ ಗೆ ವಿಕೆಟ್ ತೆತ್ತರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಎಚ್ಚರಿಕೆಯ ಆಟಕ್ಕೆ ಮುಂದಾದರು.
ಈ ವೇಳೆ ಐಯ್ಯರ್ 38 ರನ್ ಗಳಿಸಿ ಔಟ್ ಆದರು. ಬಳಿಕ ಕೊಹ್ಲಿ ಜೊತೆಗೂಡಿದ ರಾಹುಲ್ ಆಸೀಸ್ ಬೌಲರ್ ಗಳ ತಲೆಬಿಸಿಗೆ ಕಾರಣವಾದರು.
ಈ ವೇಳೆ ಅದ್ಭುತವಾಗಿ ಆಡುತ್ತಿದ್ದ ಕೊಹ್ಲಿ (89) ಹೆನ್ರಿಕ್ಯೂಸ್ ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು.
ಇನ್ನು ರಾಹುಲ್ ( 76) ಹಾರ್ದಿಕ್ (28) ಜಡೇಜಾ (24) ರನ್ ಗಳಿಸಿ ಹೊರ ನಡೆದರು.
ಕೊನೆಯದಾಗಿ ಟೀಂ ಇಂಡಿಯಾ 50 ಓವರ್ ಗಳಿಗೆ 9 ವಿಕೆಟ್ ಕಳೆದುಕೊಂಡು 338 ರನ್ ಮಾತ್ರ ಪೇರಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಕೈಚಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










