ಮೂರನೇ ಟೆಸ್ಟ್ ಪಂದ್ಯ : ಮೊದಲ ದಿನ ಆಸೀಸ್ ಮೇಲುಗೈ – 166/2
ಸಿಡ್ನಿ : ಟಾಸ್ ಗೆದ್ದ ಆಸೀಸ್ ಗೆ ಸಿರಾಜ್ ಶಾಕ್… ಮಳೆಯಿಂದಾಗಿ ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಂಡ ಮ್ಯಾಚ್… ರೈನ್ ಬಳಿಕ ಆಸೀಸ್ ಬ್ಯಾಟ್ಸ್ ಮನ್ಸ್ ಶೈನ್ ಇದು ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಹೈಲೇಟ್ಸ್.
ಹೌದು..! ಸಿಡ್ನಿ ಅಂಗಳದಲ್ಲಿ ಇಂಡೋ ಆಸೀಸ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ದಿನ ಆಸೀಸ್ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ದಿನದ ಅಂತ್ಯಕ್ಕೆ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಹೈದರಾಬಾದ್ ಎಕ್ಸಪ್ರೆಸ್, ಶಾಕ್ ನೀಡಿದ್ರು. ಅಪಾಯಕಾರಿ ಬ್ಯಾಟ್ಸ್ ಮೆನ್ ಆಸೀಸ್ ಓಪನರ್ ಡೇವಿಡ್ ವಾರ್ನರ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಸಿಡ್ನಿ ಅಂಗಳದಲ್ಲಿ ವರುಣ ಆರ್ಭಟಿಸಿದ. ಮಳೆಯ ಕಾರಣ ಸುಮಾರು 4 ಗಂಟೆಗಳ ಕಾಲ ಪಂದ್ಯ ಸ್ಥಗಿತಗೊಂಡಿತ್ತು.
ಮಳೆ ನಿಂತ ಬಳಿಕ ಬ್ಯಾಟಿಂಗ್ ಆರಂಭಿಸಿದ ವಿಲ್ ಪುಕೋವ್ ಸ್ಕಿ ಮತ್ತು ಲಾಬುಶೇನ್ ಆಸೀಸ್ ತಂಡಕ್ಕೆ ಆಸರೆಯಾದ್ರು. ಚೊಚ್ಚಲ ಪಂದ್ಯವಾಡುತ್ತಿರುವ ವಿಲ್ ಪುಕೋವ್ ಸ್ಕಿ ಪದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ರು.
ಇಬ್ಬರು ಆಟಗಾರರು 2ನೇ ವಿಕೆಟ್ ಗೆ 100 ರನ್ಗ ಳ ಜೊತೆಯಾಟವಾಡಿ, ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ರು.
ಟ್ರಂಪ್ ಬೆಂಬಲಿಗರ ದಾಂಧಲೆ : ಅಮೆರಿಕಾದ ಕರಾಳ ದಿನ ಎಂದ ಜೋ ಬೈಡನ್
ಇತ್ತ ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ನವದೀಪ್ ಸೈನಿ, 62 ರನ್ ಗಳಿಸಿದ್ದ ಪುಕೋವ್ ಸ್ಕಿ ಅವರನ್ನು ಎಲ್ ಬಿ ಬಲೆಗೆ ಕಡೆವಿ, ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ವಿಕೆಟ್ ಕಬಳಿಸಿದ್ರು.
ನಂತರ ಜೊತೆಯಾದ ಲಾಬುಶೇನ್ ಜೊತೆ ಸೇರಿದ ಸ್ಮಿತ್ ಭಾರತೀಯ ಬೌಲರ್ ಗಳ ಬೆವರಿಳಿಸಿದ್ರು. ಈ ಮಧ್ಯೆ ಲಾಬುಶೇನ್ ಟೆಸ್ಟ್ ಕ್ರಿಕೆಟ್ ನಲ್ಲಿ 9ನೇ ಅರ್ಧಶತಕ ದಾಖಲಿಸಿದ್ರು.
ಅಂತಿಮವಾಗಿ ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 2 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಸ್ಟೀವ್ ಸ್ಮಿತ್ 31 ರನ್ ಮತ್ತು ಲಾಬುಶೇಲ್ 67 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತದ ಪರ ಸೈನಿ ಮತ್ತು ಸಿರಾಜ್ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








