ಬಾಕ್ಸಿಂಡ್ ಡೇ ಟೆಸ್ಟ್ – ಟೀಮ್ ಇಂಡಿಯಾ ವಿರುದ್ಧ ಸೋಲಿನ ಬಲೆಯೊಳಗೆ ಬಿದ್ದ ಆಸ್ಟ್ರೇಲಿಯಾ
131 ರನ್ ಗಳ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಟೀಮ್ ಇಂಡಿಯಾ ವಿರುದ್ಧ ಸೋಲಿನ ಭೀತಿಗೆ ಸಿಲುಕಿದೆ.
ಮೂರನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 2 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಆದ್ರೆ ಆರು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನ 195 ರನ್ ಗೆ ಉತ್ತರವಾಗಿ ಟೀಮ್ ಇಂಡಿಯಾ 326 ರನ್ ದಾಖಲಿಸಿತ್ತು. ಹೀಗಾಗಿ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದ ಆಸೀಸ್ ಬ್ಯಾಟ್ಸ್ ಮೆನ್ ಗಳಿಗೆ ಟೀಮ್ ಇಂಡಿಯಾ ಬೌಲರ್ ಗಳು ಮತ್ತೊಮ್ಮೆ ಕಂಟಕವಾಗಿ ಪರಿಣಮಿಸಿದ್ರು.
ಎರಡನೇ ಇನಿಂಗ್ಸ್ ನ ಆರಂಭದಲ್ಲೇ ಉಮೇಶ್ ಯಾದವ್ ಜೋಯ್ ಬನ್ರ್ಸ್ (4 ರನ್) ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ರು.
ಬಳಿಕ ಮಾರ್ನಸ್ ಲಾಬುಸ್ಚೆಂಜ್ 28 ರನ್ ಗಳಿಸುವಷ್ಟರಲ್ಲಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ರು.
ಹಾಗೇ ಸ್ಟೀವ್ ಸ್ಮಿತ್ ಎಂಟು ರನ್ ಗಳಿಸಿದ್ದಾಗ ಬುಮ್ರಾ ಅವರ ಚಮತ್ಕಾರದ ಎಸೆತಕ್ಕೆ ಬಲಿಯಾದ್ರು.
ಇನ್ನೊಂದೆಡೆ ಕ್ರೀಸ್ಗೆ ಅಂಟಿಕೊಂಡಂತೆ ಬ್ಯಾಟ್ ಬೀಸುತ್ತಿದ್ದ ಆರಂಭಿಕ ಮ್ಯಾಥ್ಯೂ ವಾಡೆ 40 ರನ್ ಗಳಿಗೆ ತನ್ನ ಹೋರಾಟವನ್ನು ಮುಗಿಸಿದ್ರು. ವಾಡೆ ಅವರನ್ನು ರವೀಂದ್ರ ಜಡೇಜಾ ಅವರ ಎಲ್ ಬಿ ಬಲೆಗೆ ಬಿದ್ರು.
ಇನ್ನು ಟ್ರಾವಿಡ್ ಹೆಡ್ 17 ರನ್ ಗಳಿಸಿ ಮಹಮ್ಮದ್ ಸಿರಾಜ್ಗೆ ಬಲಿಯಾದ್ರೆ, ನಾಯಕ ಟೀಮ್ ಪೇನ್ ಒಂದು ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದ್ರು.
ಮೂರನೇ ದಿನದ ಅಂತ್ಯಕ್ಕೆ ಕ್ಯಾಮರೂನ್ ಗ್ರೀನ್ ಅಜೇಯ 17 ರನ್ ಹಾಗೂ ಪ್ಯಾಟ್ ಕಮಿನ್ಸ್ ಅಜೇಯ 15 ರನ್ ಗಳೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕ್ಯಾಮರೂನ್ ಗ್ರೀನ್ ಮತ್ತು ಪ್ಯಾಟ್ ಕಮಿನ್ಸ್ ಅವರು ಏಳನೇ ವಿಕೆಟ್ ಗೆ ಅಜೇಯ 34 ರನ್ ಪೇರಿಸಿದ್ದಾರೆ. ಆಸ್ಟ್ರೇಲಿಯಾದ ಮೂರನೇ ದಿನದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.sa
ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದ್ರೆ, ಉಮೇಶ್ ಯಾದವ್, ಬೂಮ್ರಾ, ಅಶ್ವಿನ್ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಇನ್ನು ಮೂರನೇ ದಿನ ಆಟದಲ್ಲಿ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಸ್ನಾಯುಸೆಳೆತಕ್ಕೊಳಗಾಗಿದ್ದಾರೆ. ಹೀಗಾಗಿ ಅವರು 3.3 ಓವರ್ ಗಳನ್ನು ಮಾತ್ರ ಮಾಡಿದ್ದಾರೆ.