ವಿಷಾದ ನಡುವೆ ಇದು ಅವಶ್ಯಕತೆಯೇ…. ಗವಾಸ್ಕರ್ ವಿರುದ್ಧ ಟೀಕೆ
ಟೀಂ ಇಂಡಿಯಾದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳು ಕಿಡಿಕಾರಿವೆ.
ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ನಿಧನದಿಂದ ನಾವು ದುಃಖದಲ್ಲಿದ್ದರೇ ನಿಮಗೆ ಯಾರು ಶ್ರೇಷ್ಠರು ಎಂಬುದು ಅವಶ್ಯಕತೆಯೇ ಎಂದು ಪ್ರಶ್ನಿಸುತ್ತಿವೆ.
ಇಂಡಿಯಾ ಟುಡೆ ಸಂದರ್ಶನದಲ್ಲಿ ಸುನೀಲ್ ಗವಾಸ್ಕರ್.. ವಾರ್ನ್ ಶ್ರೇಷ್ಠ ಸ್ಪಿನ್ನರ್ ಅನ್ನೋದನ್ನ ನೀವು ನಂಬುತ್ತೀರಾ ಎಂದು ಪ್ರಶ್ನಿಸಿದ್ದರು.
”ನನ್ನ ದೃಷ್ಟಿಯಲ್ಲಿ ವಾರ್ನ್ ಗಿಂತ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಮತ್ತು ಟೀಂ ಇಂಡಿಯಾ ಸ್ಪಿನ್ನರ್ ಗಳ ನಂತರ ವಾರ್ನ್ ಗೆ ಸ್ಥಾನವಿದೆ.
ಏಕೆಂದರೆ ವಾರ್ನ್ ಶ್ರೇಷ್ಠ ಸ್ಪಿನ್ನರ್ ಆಗಿರಬಹುದು, ಆದರೆ ಟೀಂ ಇಂಡಿಯಾ ವಿರುದ್ಧ ಕಳಪೆ ದಾಖಲೆ ಹೊಂದಿದ್ದಾರೆ.
ವಿಶ್ವದ ಎಲ್ಲಿ ಬೇಕಾದರೂ ಬೌಲಿಂಗ್ ಮಾಡಬಹುದಾದ ವಾರ್ನ್ ಭಾರತಕ್ಕೆ ಬಂದಾಗ ಸಾಮಾನ್ಯ ಬೌಲರ್ ಆಗಿ ಹೊರಹೊಮ್ಮುತ್ತಾರೆ.
ವಾರ್ನ್ ಈ ಹಿಂದೆ ನಾಗ್ಪುರದಲ್ಲಿ ನಡೆದ ಟೆಸ್ಟ್ ನಲ್ಲಿ ಐದು ವಿಕೆಟ್ ಪಡೆದಿದ್ದರು. ಇದು ಜಹೀರ್ ಖಾನ್ ರೂಪದಲ್ಲಿ ವಾರ್ನ್ ಅವರ ಐದನೇ ವಿಕೆಟ್ ಆಗಿತ್ತು.
ಟೀಂ ಇಂಡಿಯಾ ಆಟಗಾರರು ಸ್ಪಿನ್ ಗೆ ಚೆನ್ನಾಗಿ ಆಡಬಲ್ಲರು. ಹಾಗಾಗಿ ವಾರ್ನ್ ಅವರನ್ನು ಶ್ರೇಷ್ಠ ಸ್ಪಿನ್ನರ್ ಎಂದು ಬಣ್ಣಿಸಲು ಸಾಧ್ಯವಿಲ್ಲ.
ಆದರೆ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಟೀಂ ಇಂಡಿಯಾ ಆಟಗಾರರಿಗೆ ಹೆಚ್ಚು ಕಾಡಿದ್ದಾರೆ. ಭಾರತದ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ.
ಅದಕ್ಕಾಗಿಯೇ ನಾನು ನನ್ನ ಪುಸ್ತಕದಲ್ಲಿ ಮುರಳೀಧರನ್ ಅವರನ್ನು ವಾರ್ನ್‌ಗಿಂತ ಮೊದಲು ಇರಿಸಿದ್ದೇನೆ ಎಂದಿದ್ದಾರೆ.
ಸುನೀಲ್ ಗವಾಸ್ಕರ್ ಹೇಳಿಕೆಗೆ ಆಸೀಸ್ ಮಾಧ್ಯಮಗಳು ಹಾಗೂ ಫಾಕ್ಸ್ ಸ್ಪೋರ್ಟ್ಸ್ ಮತ್ತು ಹೆರಾಲ್ಡ್ ಸನ್ ನಂತಹ ನಿಯತಕಾಲಿಕೆ, ಹಲವು ಕ್ರಿಕೆಟ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
”ಗವಾಸ್ಕರ್ ದಾಖಲೆಗಳ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವೇ ಎಂದು ಯೋಚಿಸಿ. ಯಾರು ಏನೇ ಅಂದ್ರೂ ಅವರು ದಿಗ್ಗಜ ಸ್ಪಿನ್ನರ್ ಎನ್ನುತ್ತಿದ್ದಾರೆ.









