World No 1: 25 ನೇ ವಯಸ್ಸಿಗೆ ಆ್ಯಶ್ಲೆ ಬಾರ್ಟಿ ನಿವೃತ್ತಿ
ಕೇವಲ 25ನೇ ವಯಸ್ಸಿನಲ್ಲಿ ಟೆನಿಸ್‌ಗೆ ನಿವೃತ್ತಿ ಘೋಷಣೆ
ಟೆನಿಸ್ ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಶ್ಲೆ
ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಆಶ್ಲೆ
ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೇವಲ 25ನೇ ವಯಸ್ಸಿನಲ್ಲಿ ಟೆನಿಸ್‌ಗೆ ನಿವೃತ್ತಿ ಘೋಷಿಸಿ ಕ್ರೀಡಾಭಿಮಾನಿಗಳನ್ನು ಆಘಾತಗೊಳಿಸಿದ್ದಾರೆ.
ಆ್ಯಶ್ಲೆ ಅವರು ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿದ್ದಾರೆ.
ಆ್ಯಶ್ಲೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ವಿದಾಯ ಘೋಷಿಸಿದ್ದಾರೆ.
2010 ರಲ್ಲಿ ವೃತ್ತಿಪರ ಟೆನಿಸ್ ವೃತ್ತಿಜೀವನವನ್ನು ಆರಂಭಿಸಿದ ಬಾರ್ಟಿ 15 ಸಿಂಗಲ್ಸ್ ಮತ್ತು 12 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಈ ಪೈಕಿ 3 ಗ್ಲಾಂಡ್ಸ್ಲಾಂ ಪ್ರಶಸ್ತಿಗಳು ಕೂಡ ಸೇರಿದೆ. ಬಾರ್ಟಿ 2019ರಲ್ಲಿ ಫ್ರೆಂಚ್ ಓಪನ್.
2021ರಲ್ಲಿ ವಿಂಬಲ್ಡನ್ ಮತ್ತು 2022ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದು ಸಾಧನೆ ಮಾಡಿದ್ದರು.
ಸತತ 121 ವಾರಗಳ ಕಾಲ ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿ ಮಿಂಚಿದ್ದರು. ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಾರ್ಟಿ ತನ್ನದೇ ದೇಶದಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು 44 ವರ್ಷಗಳ ಬಳಿಕ ಗೆದ್ದುಕೊಂಡ ಮೊದಲ ಆಸ್ಟ್ರೇಲಿಯನ್ ಮಹಿಳೆ ಎಂಬ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. australian-star-ashleigh-barty-retires-from-tennis