ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಾಯಕ ಆ್ಯರೋನ್ ಪಿಂಚ್..
ಆಸ್ಟ್ರೇಲಿಯಾ ಸೀಮಿತ ಓವರ್ಗಳ ನಾಯಕ ಆ್ಯರೋನ್ ಪಿಂಚ್ ಏಕದಿನ ಕ್ರಿಕೆಟ್ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಕೆಲ ತಿಂಗಳಿಂದ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಫಿಂಚ್ ನಿವೃತ್ತಿಯ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಕೆಲವು ಉತ್ತಮ ನೆನಪುಗಳೊಂದಿಗೆ ಇದೊಂದು ಅಧ್ಭುತ ಸವಾರಿ ಅಧ್ಬುತ ಏಕದಿನ ತಂಡದ ಭಾಗವಾಗಲು ನಾನು ಅದೃಷ್ಟ ಶಾಲಿಯಾಗಿದ್ದೇನೆ. ಮುಂದಿನ ಭಾನುವಾರ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯವಾಡಲಿದ್ದೇನೆ ಎಂದು ಆ್ಯರೋನ್ ಪಿಂಚ್ ಹೇಳಿದ್ದಾರೆ.
ಫಿಂಚ್ ಏಕದಿನಕ್ಕೆ ವಿದಾಯ ಹೇಳಿದ್ದರೂ, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಫಿಂಚ್, ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್ ನಲ್ಲಿ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ಕಳೆದ 7 ಏಕದಿನ ಪಂದ್ಯಗಳ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 0,5,5,1,15,0,0 ರನ್ ಮಾತ್ರ ಗಳಿಸಿದ್ದಾರೆ.
2013 ರಲ್ಲಿ ಶ್ರೀಲಂಕಾ ವಿರುರುದ್ಧ ಪದಾರ್ಪಣೆ ಮಾಡಿದ್ದ ಪಿಂಚ್ ಆಸ್ಟ್ರೇಲಿಯಾ ತಂಡದ ಪರ ಒಟ್ಟು 145 ಏಕದಿನ ಪಂದ್ಯಗಳನ್ನಾಡಿದ್ದು, 5401 ರನ್ಗಳಿಸಿದ್ದಾರೆ. ಇದರಲ್ಲಿ 17 ಶತಕ ಸೇರಿಕೊಂಡಿವೆ. 2020ರಲ್ಲಿ ಏಕದಿನ ಕ್ರಿಕೆಟ್ನ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಗೆದ್ದಿದ್ದರು. ಜೊತೆಗೆ 2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.








