ಆಧಾರ್ ನ ಸತ್ಯಾಸತ್ಯತೆ ಪರಿಶೀಲಿಸಲು – UIDAI ತಿಳಿಸಿರುವ ಈ ಸೂಚನೆಗಳನ್ನ ಗಮನಿಸಿ…
ಆಧಾರ್ ಕಾರ್ಡ್ ಈಗ ದಿನ ನಿತ್ಯದ ಅಗತಗ್ಯಗಳನ್ನ ಪೂರೈಸುವ ದಾಖಲೆಯಾಗಿ ಮತ್ತು ಗುರುತಿನ ಚೀಟಿಯಾಗಿ ಬದಲಾದಗಿದೆ. ಸರ್ಕಾರದ ಅಥವಾ ಸರ್ಕಾರೇತರ ಸಂಸ್ಥೆಯ ಎಲ್ಲಾ ಕೆಲಸಗಳಿಗೂ ಈಗ ಆಧಾರ್ ಬೇಕೆ ಬೇಕು. ಆದರೆ ಗುರುತಿನ ಪುರಾವೆಯಾಗಿ ಸ್ವೀಕರಿಸುವ ಆಧಾರ್ ಕಾರ್ಡ್ ನ ಅಸಲಿತನವನ್ನ ಪರೀಶೀಲಿಸುವ ಸಮಸ್ಯೆ ಸಂಸ್ಥೆಗಳಿಗೆ ಎದ್ದು ತೊರುತ್ತಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇದೀಗ ಅಂತಹ ಸಂಸ್ಥೆಗಳ ರಕ್ಷಣೆಗೆ ಬಂದಿದೆ ಮತ್ತು ಆಧಾರ್ನ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಕೆಲವೊಂದು ಹಂತಗಳನ್ನ ಪರಿಚಯಿಸುತ್ತಿದೆ.
ಈ ರೀತಿ ಮಾಡುವುದರಿಂದ ಆನ್ಲೈನ್ ಮತ್ತು ಆಫ್ಲೈನ್ ಮೋಡ್ನಲ್ಲಿ ‘ಆಧಾರ್’ ನ ಸತ್ಯಾಸತ್ಯತೆಯನ್ನು ಸುಲಭವಾಗಿ ಪರೀಕ್ಷಿಸಬಹುದು ಎಂದು ಯುಐಡಿಎಐ ಹೇಳಿದೆ.
ಹಂತಗಳು:
ಆನ್ಲೈನ್ ಮೋಡ್- ವಯಸ್ಸು, ಲಿಂಗ, ರಾಜ್ಯ ಮತ್ತು ಆಧಾರ್ ಜೊತೆ ಹೊಂದಿಸಿರುವ ಮೊಬೈಲ್ನ ಕೊನೆಯ ಮೂರು ನಂಬರ್ ಗಳನ್ನ ಫೀಡ್ ಮಾಡುವ ಮೂಲಕ ಪತ್ತೆ ಹಚ್ಚಬಹುದು. https://myaadhaar.uidai.gov.in/verifyAadhaar ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು.
ಆಫ್ಲೈನ್ ಮೋಡ್- ಪ್ರತಿ ಆಧಾರ್ ಕಾರ್ಡ್/ಆಧಾರ್ ಪತ್ರ/ಇ ಆಧಾರ್ನಲ್ಲಿ ಸುರಕ್ಷಿತ QR ಕೋಡ್ ಅನ್ನು ಮುದ್ರಿಸಲಾಗಿದೆ, ಇದು ಜನಸಂಖ್ಯಾ ವಿವರಗಳನ್ನು (ಹೆಸರು, ಲಿಂಗ, ಜನ್ಮ ದಿನಾಂಕ ಮತ್ತು ವಿಳಾಸ) ಜೊತೆಗೆ ಆಧಾರ್ ಸಂಖ್ಯೆ ಹೊಂದಿರುವವರ ಭಾವಚಿತ್ರವನ್ನು ಒಳಗೊಂಡಿರುತ್ತದೆ.
ಇನ್ನೊಬ್ಬ ವ್ಯಕ್ತಿಯ ಭಾವಚಿತ್ರವನ್ನು ಫೋಟೋಶಾಪ್ ಮಾಡುವ ಮೂಲಕ ಆಧಾರ್ ಕಾರ್ಡ್ ಅನ್ನು ಟ್ಯಾಂಪರ್ ಮಾಡಿದರೂ, ಕ್ಯೂಆರ್ ಕೋಡ್ನಲ್ಲಿರುವ ಮಾಹಿತಿಯು ಸುರಕ್ಷಿತವಾಗಿರುತ್ತದೆ. ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಲ್ಲಿ ಲಭ್ಯವಿರುವ “ಆಧಾರ್ ಕ್ಯೂಆರ್ ಸ್ಕ್ಯಾನರ್” ಆಪ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ ಓದಬಹುದು.