ಸ್ಯಾಂಡಲ್ ವುಡ್ ಗೆ ಒಂದಾದ ಮೇಲೊಂದು ವಿಭಿನ್ನ ಚಿತ್ರಗಳು ತೆರೆಗಪ್ಪಳಿಸುತ್ತಿದ್ದು, ಸಿನಿಪ್ರಿಯರ ಪ್ರೀತಿ ಗೆಲ್ಲುವಲ್ಲಿ ಸಕ್ಸಸ್ ಆಗ್ತಿವೆ. ಇದೀಗ ಅಂತಹದ್ದೇ ಒಂದು ಕನ್ನಡದ ಚಿತ್ರ ಬೆಳ್ಳಿ ತೆರೆಗೆ ಶೀಘ್ರವೇ ಎಂಟ್ರಿಕೊಡಲು ಸಿದ್ಧವಾಗ್ತಿದೆ. “ ಅಧ್ಯಕ್ಷ “ ಶರಣ್ ಅಭಿನಯದ ಅವತಾರ ಪುರುಷ ಚಿತ್ರ ಶೀಘ್ರವೇ ಅಭಿಮಾನಿಗಳನ್ನ ರಂಜಿಸಲು ತೆರೆಗಪ್ಪಳಿಸಲು ಸಜ್ಜಾಗಿದೆ.
ಅವತಾರ ಪುರುಷದ ಕೊನೆಯ ಹಂತದ ಚಿತ್ರೀಕರಣ ಇದೀಗ ಪ್ರಾರಂಭವಾಗಿದ್ದು, ಚಿತ್ರತಂಡ ಅತ್ಯಂತ ಹುಮ್ಮಸ್ಸಿನಿಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿಬಿಟ್ಟಿದೆ. ಇದೇ ವರ್ಷದ ಅಂತ್ಯಕ್ಕೆ ಅಂದ್ರೆ ಡಿಸೆಂಬರ್ ಅಂತ್ಯದ ವೇಳೆಗೆ ಚಿತ್ರ ಬಿಡುಗಡೆ ಮಾಡಲು ಸಿನಿತಂಡ ಪ್ಲಾನ್ ಮಾಡಿಕೊಂಡಿದೆ.
ಕಾಮಿಡಿ ಸಿನೆಮಾಗಳಲ್ಲೇ ಹೆಚ್ಚು ನಟಿಸುವ ಸ್ಯಾಂಡಲ್ ವುಡ್ ನ ನೆಚ್ಚಿನ ನಟ ಅಂದ್ರೆ ಅದು ನಮ್ಮ ರ್ಯಾಂಬೋ ಶರಣ್. ಶರಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿರುವ ಈ ಚಿತ್ರದಲ್ಲಿ ಆಶಿಕಾ ರಂಗನಾಥ್, ಸಾಯಿ ಕುಮಾರ್, ಸುಧಾರಾಣಿ, ಭವ್ಯ, ಕಾಮಿಡಿ ಕಿಂಗ್ ಸಾಧುಕೋಕಿಲ, ಶ್ರೀನಗರ ಕಿಟ್ಟಿ, ಬಿ ಸುರೇಶ ಹೀಗೆ ದೊಡ್ಡ ದೊಡ್ಡ ನಟರ ತಾರಾಬಳಗವೇ ಇದೆ.
ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ ಟೈನ್ ಸಿನಿಮಾವಾಗಿದೆ. ಇನ್ನೂ ಶರಣ್ ಸಿನೆಮಾ ಅಂದ್ರೆ ಅದ್ರಲ್ಲಿ ಕಾಮಿಡಿಗೇನು ಕಮ್ಮಿ ಇರಲ್ಲ. ಅದ್ರಲ್ಲೂ ಕಾಮಿಡಿ ಕಿಂಗ್ ಸಾಧು ಸಹ ಚಿತ್ರಲದಲ್ಲಿರೋದು ಚಿತ್ರದಲ್ಲಿ ಸಿನಿಪ್ರಿಯರಿಗೆ ಭರ್ಜರಿ ರಸದೌತಣ ಸಿಗಲಿದೆ.
ಪುಷ್ಕರ್ ಫಿಲ್ಮ್ಸ್ ನ ಬ್ಯಾನರರ್ ಅಡಿ ಮೂಡಿ ಬರ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನ ಅವರು ಬಂಡವಾಳ ಹೂಡಿದ್ದಾರೆ. ಇನ್ನೂ ಸುನಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರೆ, ವಿಲ್ಲಿಯಮ್ ಡೇವಿಡ್ ಚಾಯಾಗ್ರಹಣ ಚಿತ್ರಕ್ಕಿದೆ. ಇನ್ನೂ ಅರ್ಜುನ್ ಜನ್ಯರ ಸಂಗೀತ ಚಿತ್ರಕ್ಕಿದೆ.