ನಾವು ಈವರೆಗೂ ಅನಕ ರೀತಿಯ ಕ್ರಮಿ ಕೀಟಗಳು, ಹುಳುಗಳನ್ನು ನೋಡಿರುತ್ತೇವೆ. ಅದ್ರಲ್ಲಿ ಕೆಲವನ್ನು ನೋಡಿದ್ರೆ ಹೆದರೋದು ಉಂಟು.
ಅಂತಹದೇ ಪಟ್ಟಿಗೆ ಸೇರುವುದು ಜೇಡರ. ನಾವು ಈವರೆಗೂ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿ, ಹಾಲಿವುಡ್ ಸಿನೆಮಾಗಳ್ಲಿ ಅತ್ಯಂತ ಭಯಾನಕ ಜೇಡಗಳನ್ನ ನೋಡಿರುತ್ತೇವೆ.
ಆದರೆ ನೀವು ಎಂದಾದ್ರು ಪಕ್ಷಿ ನುಂಗುವ ಜೇಡವನ್ನು ನೋಡಿದ್ದೀರಾ ಅಥವಾ ಅದರ ಬಗ್ಗೆ ಕೇಳಿದ್ದೀರಾ…!
ಇದೇನಪ್ಪ ಜೇಡ ಎಂದಾದ್ರು ಪಕ್ಷಿ ತಿನ್ನೋದುಂಟಾ..? ಅಂತ ಅಂದ್ಕೊಂಡ್ರಾ..! ಇದು ನಂಬಲಸಾಧ್ಯವೇ. ಆದರೂ ನೀವು ನಂಬಲೇಬೇಕು. ಯಾಕಂದ್ರೆ ಇದು ನಡೆದಿರೋದಂತು ಸತ್ಯ.
ಎಸ್.. ಜೇಡವೊಂದು ಸಂಪೂರ್ಣ ಹಕ್ಕಿಯನ್ನು ತಿನ್ನುತ್ತಿರುವ ದೃಶ್ಯವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟ್ವೀಟ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿರುವ ಈ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲ ಪ್ರಕೃತಿಯ ವಿಸ್ಮಯಕ್ಕೆ ಮೂಕ ವಿಸ್ಮಿತರಾಗಿದ್ದಾರೆ. ನಿಜಕ್ಕೂ ಜೀಡ ಪಕ್ಷಿ ತಿನ್ನುತ್ತಿದೆಯಲ್ಲಾ ಎಂದು ಶಾಕ್ ಆಗಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಇದಕ್ಕೆ “ನೇಚರ್ ಈಸ್ ವೆರಿ ಸ್ಕೇರಿ” ಎಂದು ಕ್ಯಾಪ್ಷನ್ ಕೊಡಲಾಗಿದೆ. ಕಪ್ಪು ಬಣ್ಣದ ಭಾರೀ ಗಾತ್ರದ ಜೇಡ ಪಕ್ಷಿಯನ್ನು ನುಂಗುತ್ತಿದ್ದಾರೆ ಅಬ್ಬಾ.. ಒಂದು ಕ್ಷಣ ಮೈ ಝುಂ ಎನ್ನುತ್ತೆ.
ಅವಿಕುಲೆಯಾ ಎಂಬ ಜೇಡ ನಿಧಾನವಾಗಿ ಹಕ್ಕಿಯನ್ನ ತಿನ್ನುತ್ತಿದ್ದು, ಜನರನ್ನು ನಿಬ್ಬೆರಗಾಗಿಸಿದೆ. ಇನ್ನೂ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.








