ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿರೋ ಕರೋನಾ ವೈರಸ್, ಮರಣ ಮೃದಂಗ ಬಾರಿಸುತ್ತಿದೆ. ಜನ ಜೀವನ ಅಕ್ಷರಶಃ ತತ್ತರಿಸಿ ಹೋಗಿದೆ. ಚೀನಾ ದೇಶವಂತೂ ನಲುಗಿ ಹೋಗಿದೆ. ಇನ್ನು ಕರುನಾಡಿಗೂ ಈ ವೈರಸ್ ವಕ್ಕರಿಸಿಕೊಂಡಿದ್ದು, ಈಗಾಗಲೇ ಒಂದು ಜೀವವನ್ನ ಬಲಿ ತೆಗೆದುಕೊಂಡಿದೆ. ಐವರಲ್ಲಿ ಈ ಸೋಂಕು ಪತ್ತೆಯಾಗಿದ್ದು, ತೀವ್ರನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದೆ. ಈ ಹಿನ್ನೆಲೆಯಲ್ಲಿ “ದಾರದಹಳ್ಳಿ ಸೇವಾ ಟ್ರಸ್ಟ್” ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದು, ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ 2 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯ್ತು. ಮೊದಲು ದಾರದಹಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ನಂತರ ಬಿಳ್ಳೂರು ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ರು. ಈ ವೇಳೆ ಮಕ್ಕಳಿಗೆ ಕರೋನಾ ವೈರಸ್ ಎಂದ್ರೆ ಏನು..? ಅದರ ಗುಣಲಕ್ಷಣಗಳೇನು..? ಅದು ಹೇಗೆ ಹರಡುತ್ತದೆ. ಮುನ್ನೆಚ್ಚರಿಕಾ ಕ್ರಮಗಳೇನು..? ಎಂಬುದರ ಬಗ್ಗೆ ಬಿಳ್ಳೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ನಾಯಕ್ ಅವರು ಮಾಹಿತಿ ನೀಡಿದ್ರು. ಇದಕ್ಕೆ ದಾರದಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಹಾಲೇಗೌಡ ಹಾಗೂ ಬಿಳ್ಳೂರು ಶಾಲೆಯ ಮುಖ್ಯ ಶಿಕ್ಷಕರಾದ ಹರಿಯ ನಾಯಕ್ ಸಹಕಾರ ನೀಡಿದ್ರು. ಈ ವೇಳೆ ಜಾಗೃತಿ ಕರಪತ್ರವನ್ನ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ನೀಡಿ ಜಾಗೃತಿ ಮೂಡಿಸಿದ್ರು. ಇನ್ನು ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ನೇತ್ರಾವತಿ ಭಾಗಿಯಾಗಿದ್ರು. ಈ ವೇಳೆ ದಾರದಹಳ್ಳಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್ ಡಿ.ಜಿ.ಉಪಾಧ್ಯಕ್ಷರಾದ ಸುಮ ಎಂ.ಆರ್, ಕಾರ್ಯದರ್ಶಿಯಾದ ಜಗನ್ನಾಥ್ ಡಿ.ಈ, ಸಂಘಟನಾ ಕಾರ್ಯದರ್ಶಿಯಾದ ಕಲಾವತಿ ಡಿ.ಎಸ್, ಖಜಾಂಚಿ ನಿಶಾಂತ್ ಡಿ.ಆರ್ ಹಾಗೂ ಸದಸ್ಯರಾದ ರಾಗಿಣಿ, ವನಜಾಕ್ಷಿ, ಅಕ್ಷತಾ ಮುಂತಾದವರು ಭಾಗಿಯಾದ್ರು.
ವರದಿ: ವೆಬ್ ಡೆಸ್ಕ್ ಸ್ಪೀಡ್ ನ್ಯೂಸ್ ಕನ್ನಡ
ಬಿಜೆಪಿಯಲ್ಲಿ ಬಿರುಕು: ಅತೃಪ್ತ ನಾಯಕರ ‘ಬಣ’ ಕದನ
ಕರ್ನಾಟಕದ ಬಿಜೆಪಿ ಘಟಕದಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದೆ. ಪಕ್ಷದೊಳಗಿನ ಅತೃಪ್ತ ನಾಯಕರು ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ನಿವಾಸದಲ್ಲಿ ಸಭೆ ಸೇರಿದ್ದು, ಈ ಸಭೆ ಹಲವು...